ADVERTISEMENT

ನಯೀಂ ಹ್ಯಾಟ್ರಿಕ್‌ ಗೋಲು

ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌: ಎಜಿಒಆರ್‌ಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 13:24 IST
Last Updated 8 ಜುಲೈ 2022, 13:24 IST
ಡಿವೈಇಎಸ್‌ ಬಿ ತಂಡದ ಪ್ರಜ್ವಲ್‌ (ಎಡ) ಮತ್ತು ಸಾಯ್ ಎಸ್‌ಟಿಸಿ ತಂಡದ ನಕುಲ್ ಮಲಾಡ್‌ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌
ಡಿವೈಇಎಸ್‌ ಬಿ ತಂಡದ ಪ್ರಜ್ವಲ್‌ (ಎಡ) ಮತ್ತು ಸಾಯ್ ಎಸ್‌ಟಿಸಿ ತಂಡದ ನಕುಲ್ ಮಲಾಡ್‌ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌   

ಬೆಂಗಳೂರು: ನಯೀಂ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಅಕೌಂಟಂಟ್‌ ಜನರಲ್ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌ (ಎಜಿಒಆರ್‌ಸಿ) ತಂಡವು ಹಾಕಿ ಕರ್ನಾಟಕ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಕಿ ಅಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿಎಜಿಒಆರ್‌ಸಿ 7–1ರಿಂದ ಪೋಸ್ಟಲ್ ತಂಡಕ್ಕೆ ಸೋಲುಣಿಸಿತು. ನಯೀಂ 24, 50 ಮತ್ತು 59ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ನಿತಿನ್ ತಿಮ್ಮಯ್ಯ (14ನೇ ನಿ.), ಚಿರಂತ್ ಸೋಮಣ್ಣ (18ನೇ ನಿ.), ಎಂ.ಬಿ. ಅಯ್ಯಪ್ಪ (37ನೇ ನಿ.) ಮತ್ತು ಜಯಪ್ರಕಾಶ್‌ (52ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು. ಪೋಸ್ಟಲ್ ತಂಡದ ಅಜಿತ್ ವಿ.ಎಂ. (11ನೇ ನಿ.) ಒಂದು ಗೋಲು ಹೊಡೆದರು.

ಮತ್ತೊಂದು ಹಣಾಹಣಿಯಲ್ಲಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡವು 3–1ರಿಂದ ಡಿವೈಇಎಸ್‌ ‘ಬಿ’ ತಂಡವನ್ನು 3–1ರಿಂದ ಮಣಿಸಿತು. ಸಾಯ್ ಪರ ಚೇತನ್ ಎಂ. (10ನೇ ನಿ.), ಅಖಿಲ್ ಅಯ್ಯಪ್ಪ (19ನೇ ನಿ.) ಮತ್ತು ರೆಡ್ಡಿ ಕಿರಣ್‌ (55ನೇ ನಿ.) ಗೋಲು ಗಳಿಸಿದರು. ಡಿವೈಇಎಸ್‌ ಬಿ ಪರ ನಿತಿನ್‌ 31ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.