ADVERTISEMENT

ಎಂಇಜಿ ತಂಡ ಚಾಂಪಿಯನ್‌

ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 14:25 IST
Last Updated 12 ಜುಲೈ 2022, 14:25 IST
ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡ ಎಂಇಜಿ ತಂಡ. ಮಂಡಿಯೂರಿದವರು (ಎಡದಿಂದ) ಮೋನಿ ಸಿಂಗ್, ಧುವೊರಿ ಪಾಂಡಿ, ಸೂರಸ್, ಅನ್ಸಾರಿ, ಸುಧಾಕರ್‌, ಸುನಿಲ್. ನಿಂತವರು: ದೀಪಕ್, ಪುಲ್ಲಯ್ಯ, ಕಿರಣ್, ಅಪ್ಪಣ್ಣ, ದಿಶಾಂತ್‌, ಅನಿಲ್‌ ಮಿಂಜ್ (ಕೋಚ್), ನಜ್ಮುದ್ದೀನ್‌ (ಕೋಚ್), ಸಿ.ಎ.ಸುಬ್ಬಯ್ಯ, ಶಶಾಂಕ್, ರೊಂಜಿತ್, ಪುನೀತ್, ಎಂ.ದಿಲಮ್, ಪಲಂಜ್ ಮತ್ತು ಪಾಂಡಿ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಮತ್ತು ಸೆಂಟರ್‌ (ಎಂಇಜಿ) ತಂಡದವರು ಮಂಗಳವಾರ ಇಲ್ಲಿ ಕೊನೆಗೊಂಡ ಆರನೇ ಋತುವಿನ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಡಿವೈಇಎಸ್‌ ‘ಎ’ ತಂಡ ‘ರನ್ನರ್ಸ್‌ ಅಪ್‌’ ಆದರೆ, ಅಕೌಂಟೆಂಟ್ ಜನರಲ್‌ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌ (ಎಜಿಒಆರ್‌ಸಿ) ಮೂರನೇ ಸ್ಥಾನ ಗಳಿಸಿತು.

ಎಫ್‌ಎಂಕೆಎಂಸಿ ಹಾಕಿ ಅರೆನಾನದಲ್ಲಿ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಎಂಇಜಿ 5–2 ರಲ್ಲಿ ಪೋಸ್ಟಲ್‌ ತಂಡವನ್ನು ಮಣಿಸಿತು.

ADVERTISEMENT

ಹ್ಯಾಟ್ರಿಕ್‌ ಗೋಲು ಗಳಿಸಿದ ಎಚ್‌.ಮಣಿ (17, 26 ಮತ್ತು 38ನೇ ನಿ.) ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇನ್ನೆರಡು ಗೋಲುಗಳನ್ನು ಪುಲ್ಲಯ್ಯ (14) ಮತ್ತು ಬಿ.ಪಳನಿಸ್ವಾಮಿ (59) ತಂದಿತ್ತರು. ಪೋಸ್ಟಲ್‌ ಪರ ವಿನಾಯಕ ಬಿಜವಾಡ್ (52) ಮತ್ತು ವಿ.ಎಂ.ಅಜಿತ್ (56) ಗೋಲು ಗಳಿಸಿದರು.

ಡಿವೈಇಎಸ್‌ ‘ಎ’ ಮತ್ತು ಕೆನರಾ ಬ್ಯಾಂಕ್‌ ನಡುವಿನ ಪಂದ್ಯ 3–3 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು.

ಡಿವೈಇಎಸ್‌ಗೆ ಹರೀಶ್‌ (2), ಪ್ರಣಾಮ್‌ ಗೌಡ (4 ಮತ್ತು 44) ಹಾಗೂ ಕೆನರಾ ಬ್ಯಾಂಕ್‌ಗೆ ಕೆ.ಪಿ.ಸೋಮಯ್ಯ (9 ಮತ್ತು 14), ಪೃಥ್ವಿರಾಜ್ (43) ಗೋಲುಗಳನ್ನು ತಂದಿತ್ತರು.

ಕಸ್ಟಮ್ಸ್‌ ಮತ್ತು ಎಜಿಒಆರ್‌ಸಿ ನಡುವಿನ ಪಂದ್ಯ 1–1 ಗೋಲಿನ ಡ್ರಾದಲ್ಲಿ ಮುಕ್ತಾಯಗೊಂಡಿತು. ಕಸ್ಟಮ್ಸ್‌ಗೆ ಪಿ.ಎಲ್‌.ತಿಮ್ಮಣ್ಣ (7), ಎಜಿಒಆರ್‌ಸಿಗೆ ನಯೀಮ್ (34) ಗೋಲು ಗಳಿಸಿದರು.

ವಿಜೇತ ತಂಡ ₹ 50 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಕ್ರಮವಾಗಿ ₹ 30 ಸಾವಿರ ಹಾಗೂ ₹ 20 ಸಾವಿರ ನಗದು ಬಹುಮಾನ ಗೆದ್ದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.