ADVERTISEMENT

ಹಾಕಿ: ಮೈಸೂರು ವಿಭಾಗ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 11:20 IST
Last Updated 24 ನವೆಂಬರ್ 2022, 11:20 IST
ಎಸ್‌ಎಸ್‌ಕೆ ಕೂಡಿಗೆ ಹಾಗೂ ಬೆಂಗಳೂರು ತಂಡಗಳ ಪೈಪೋಟಿ 
ಎಸ್‌ಎಸ್‌ಕೆ ಕೂಡಿಗೆ ಹಾಗೂ ಬೆಂಗಳೂರು ತಂಡಗಳ ಪೈಪೋಟಿ    

ಮಡಿಕೇರಿ:ಮೈಸೂರು ವಿಭಾಗದ ತಂಡಗಳುಭಾರತ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಆಯೋಜಿಸಿರುವಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿಬುಧವಾರವೂ ಪಾರಮ್ಯ ಮೆರೆದವು.

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವು ಕಲಬುರಗಿ ತಂಡವನ್ನು 9–0 ಗೋಲುಗಳಿಂದ ಪರಾಭವಗೊಳಿಸಿತು. ಎಸ್‌ಎಸ್‌ಕೆ ಕೂಡಿಗೆ ತಂಡವು ಬೆಂಗಳೂರು ತಂಡವನ್ನು 8–0ಯಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬೆಳಗಾವಿ ತಂಡ ಕಲಬುರಗಿಯನ್ನು 4–0 ಅಂತರದಲ್ಲಿ ಸೋಲಿಸಿತು.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡವು ಕಲಬುರಗಿಯನ್ನು 1–0, ಮೈಸೂರು ತಂಡವು ಬೆಂಗಳೂರು ತಂಡವನ್ನು 5–0, ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಬೆಂಗಳೂರವನ್ನು 5–0 ಗೋಲುಗಳಿಂದ ಮಣಿಸಿತು.

ADVERTISEMENT

17 ವರ್ಷದೊದೊಳಗಿನ ಬಾಲಕರ ವಿಭಾಗದಲ್ಲಿ ಎಸ್‌ಎಸ್‌ಕೆ ಕೂಡಿಗೆ ತಂಡವು ಬೆಂಗಳೂರನ್ನು 3–1, ಮೈಸೂರು ತಂಡ ಬೆಳಗಾವಿ ತಂಡವನ್ನು 5–2ರಿಂದ ಸೋಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.