ADVERTISEMENT

ಹಾಕಿ: ಭಾರತ ತಂಡಕ್ಕೆ ರಾಣಿ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 18:41 IST
Last Updated 18 ಜನವರಿ 2019, 18:41 IST
ರಾಣಿ ರಾಂಪಾಲ್‌
ರಾಣಿ ರಾಂಪಾಲ್‌   

ನವದೆಹಲಿ: ಅನುಭವಿ ಸ್ಟ್ರೈಕರ್‌ ರಾಣಿ ರಾಂಪಾಲ್‌ ಅವರು ಮುಂಬರುವ ಸ್ಪೇನ್‌ ಪ್ರವಾಸದಲ್ಲಿ ಭಾರತ ಮಹಿಳಾ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.

ಹಾಕಿ ಇಂಡಿಯಾ (ಎಚ್‌ಐ) ಶುಕ್ರವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಗೋಲ್‌ಕೀಪರ್‌ ಸವಿತಾಗೆ ಉಪ ನಾಯಕಿಯ ಜವಾಬ್ದಾರಿ ನೀಡಿದೆ.

ರಾಣಿ ಬಳಗ ಈ ಪ್ರವಾಸದ ವೇಳೆ ಸ್ಪೇನ್‌ ಎದುರು ನಾಲ್ಕು ಮತ್ತು ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ್ದ ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಜನವರಿ 26ರಂದು ಮೊದಲ ಪಂದ್ಯ ನಡೆಯಲಿದೆ.

ADVERTISEMENT

‘ಸ್ಪೇನ್‌ ಪ್ರವಾಸಕ್ಕೆ ಪ್ರಕಟಿಸಲಾಗಿರುವ ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರ್ತಿಯರಿದ್ದಾರೆ. ಸುನಿತಾ ಲಾಕ್ರಾ ಮತ್ತು ನಮಿತಾ ಟೊಪ್ಪೊ ಸೇರಿದಂತೆ ಕೆಲ ಹಿರಿಯ ಆಟಗಾರ್ತಿಯರಿಗೆ ವಿಶ್ರಾಂತಿ ನೀಡಿದ್ದೇವೆ. ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ತಿಳಿಸಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಸವಿತಾ ಮತ್ತು ರಜನಿ ಎತಿಮರ್ಪು.

ಡಿಫೆಂಡರ್‌ಗಳು: ರೀನಾ ಕೋಖರ್‌, ದೀಪ್‌ ಗ್ರೇಸ್‌ ಎಕ್ಕಾ, ಸಲಿಮಾ ಟೆಟೆ, ನಿಕಿ ಪ್ರಧಾನ್‌, ಗುರ್ಜಿತ್‌ ಕೌರ್‌ ಮತ್ತು ಸುಶೀಲಾ ಚಾನು ಪುಖ್ರಾಮ್‌ಬಮ್‌.

ಮಿಡ್‌ಫೀಲ್ಡರ್ಸ್‌: ಲಿಲಿಮಾ ಮಿಂಜ್‌, ಕರೀಷ್ಮಾ ಯಾದವ್‌, ಸೋನಿಕಾ ಮತ್ತು ನೇಹಾ ಗೋಯಲ್‌.

ಫಾರ್ವರ್ಡ್‌ಗಳು: ರಾಣಿ ರಾಂಪಾಲ್‌, ವಂದನಾ ಕಟಾರಿಯಾ, ನವನೀತ್‌ ಕೌರ್‌, ಲಾಲ್ರೆಮ್‌ಸಿಯಾಮಿ, ಉದಿತಾ ಮತ್ತು ನವಜ್ಯೋತ್‌ ಕೌರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.