ADVERTISEMENT

ಭಾರತಕ್ಕೆ ಗೆಲುವು

ನಾಲ್ಕು ರಾಷ್ಟ್ರಗಳ 21 ವಯಸ್ಸಿನೊಳಗಿನ ಮಹಿಳೆಯರ ಅಂತರರಾಷ್ಟ್ರೀಯ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:17 IST
Last Updated 2 ಜೂನ್ 2019, 19:17 IST

ಡಬ್ಲಿನ್‌ (ಪಿಟಿಐ): ಒಂದು ಗೋಲಿನ ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಹಾಕಿ ತಂಡ ಐರ್ಲೆಂಡ್‌ ವಿರುದ್ಧ 2–1ರಿಂದ ಜಯಿಸಿತು.

ಇಲ್ಲಿ ನಡೆಯುತ್ತಿರುವನಾಲ್ಕು ರಾಷ್ಟ್ರಗಳ 21 ವಯಸ್ಸಿನೊಳಗಿನವರ ಕ್ಯಾಂಟರ್‌ ಫಿಜ್‌ಗೆರಾಲ್ಡ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಐರ್ಲೆಂಡ್‌ ಪರ 10ನೇ ನಿಮಿಷದಲ್ಲಿಯೇ ಲಾರಾ ಫಾಲಿ ಗೋಲು ಬಾರಿಸಿ ಮುನ್ನಡೆಗೆ ಕಾರಣವಾದರು. ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ರೀಟ್‌ (35ನೇ ನಿಮಿಷ) ಹಾಗೂ ಶರ್ಮಿಳಾ ದೇವಿ (53ನೇ ನಿಮಿಷ) ಪಾರಮ್ಯ ಮೆರೆದರು.

ADVERTISEMENT

ಆರಂಭದ ಎರಡು ಕ್ವಾರ್ಟರ್‌ಗಳಲ್ಲಿ ಯಾವುದೇ ಮೋಡಿ ಮಾಡದ ಭಾರತ, ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ರೀಟ್‌ ಗಳಿಸಿದ ಗೋಲಿನ ಮೂಲಕ ಸಮಬಲ ಸಾಧಿಸಿತು. ಆ ಬಳಿಕ ಉಭಯ ತಂಡಗಳು ನಾಲ್ಕನೇ ಕ್ವಾರ್ಟರ್‌ನಲ್ಲಿ ಬಿರುಸಿನ ಆಟಕ್ಕಿಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.