ADVERTISEMENT

ಹಾಂಗ್‌ಕಾಂಗ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿಯತ್ತ ಸಾತ್ವಿಕ್–ಚಿರಾಗ್ ಚಿತ್ತ

ಪಿಟಿಐ
Published 8 ಸೆಪ್ಟೆಂಬರ್ 2025, 16:02 IST
Last Updated 8 ಸೆಪ್ಟೆಂಬರ್ 2025, 16:02 IST
<div class="paragraphs"><p>ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ – </p></div>

ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ –

   

ಸಂಗ್ರಹ ಚಿತ್ರ

ಹಾಂಗ್‌ಕಾಂಗ್‌: ವಿಶ್ವ ಬ್ಯಾಡ್ಮಿಂಟನ್‌ ಕಂಚಿನ ಪದಕ ವಿಜೇತ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಮಂಗಳವಾರ ಆರಂಭವಾಗಲಿರುವ ಹಾಂಗ್‌ಕಾಂಗ್‌ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ADVERTISEMENT

ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಕ್ರಮಾಂಕದಲ್ಲಿರುವ ಈ ಜೋಡಿಯು, ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಟೂರ್ನಿ ಸೇರಿದಂತೆ ಈ ವರ್ಷ ನಡೆದ ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೂ, ‘ಸೆಮಿಫೈನಲ್‌ ಸವಾಲು’ ಮೀರುವಲ್ಲಿ ಎಡವಿದ್ದು, ಈ ಟೂರ್ನಿಯಲ್ಲಿ ವೈಫಲ್ಯವನ್ನು ಮೆಟ್ಟಿ ನಿಲ್ಲುವ ವಿಶ್ವಾಸದಲ್ಲಿದೆ.

ಸಾತ್ವಿಕ್‌–ಚಿರಾಗ್‌ ಅವರು ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಶಿಯು ಸಿಯಾಂಗ್‌ ಶಿಯೆಹ್‌– ವಾಂಗ್‌ ಶಿ ಲಿನ್‌ ಜೋಡಿಯನ್ನು ಎದುರಿಸಬೇಕಿದೆ.

ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಅವರೂ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಡೆನ್ಮಾರ್ಕ್‌ನ ಲೀನ್‌ ಕ್ರಿಸ್ಟೊಫರ್ಸನ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಅಮೆರಿಕ ಓಪನ್‌ 300 ಟೂರ್ನಿಯ ವಿಜೇತ, ಕನ್ನಡಿಗ ಆಯುಷ್ ಶೆಟ್ಟಿ ಕೂಡ ಕಣದಲ್ಲಿದ್ದು, ಚೀನಾದ ಲು ಗುವಾಂಗ್‌ ಜು ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಲಕ್ಷ್ಯ ಸೇನ್‌ ಹಾಗೂ ಎಚ್‌.ಎಸ್‌. ಪ್ರಣಯ್‌ ಅವರು ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಪಾಂಡ ಸಹೋದರಿಯರಾದ ಋತುಪರ್ಣ ಹಾಗೂ ಶ್ವೇತಪರ್ಣಾ ಅವರೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಕ್ವಾರ್ಟರ್‌ಫೈಯರ್ಸ್‌ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್‌ ಅವರು ಸ್ವದೇಶದ ತರುಣ್‌ ಮನ್ನೆಪಲ್ಲಿ ವಿರುದ್ಧ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.