ADVERTISEMENT

ಗಾಲ್ಫ್‌: ಪಾರ್ಕ್‌ಗೆ ಗೆಲುವಿನ ಸಂಭ್ರಮ

ರಾಯಿಟರ್ಸ್
Published 18 ಮೇ 2020, 4:52 IST
Last Updated 18 ಮೇ 2020, 4:52 IST
ಪ್ರಶಸ್ತಿಗೆ ಮುತ್ತಿಕ್ಕಿದ ಪಾರ್ಕ್ ಹ್ಯೂನ್ ಕ್ಯುಂಗ್ -ಪಿಟಿಐ ಚಿತ್ರ
ಪ್ರಶಸ್ತಿಗೆ ಮುತ್ತಿಕ್ಕಿದ ಪಾರ್ಕ್ ಹ್ಯೂನ್ ಕ್ಯುಂಗ್ -ಪಿಟಿಐ ಚಿತ್ರ   

ಸೋಲ್ : ಪಾರ್ಕ್ ಹ್ಯೂನ್ ಕ್ಯುಂಗ್ ಅವರು ದಕ್ಷಿಣ ಕೊರಿಯಾದಲ್ಲಿ ಭಾನುವಾರ ಮುಕ್ತಾಯಗೊಂಡ ಕೆಎಲ್‌ಪಿಜಿಎ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಕೊರೊನಾ ಹಾವಳಿಯಿಂದಾಗಿ ಡಿಸೆಂಬರ್‌ ನಂತರ ನಡೆದ ಮೊದಲ ಟೂರ್ನಿಯಾಗಿತ್ತು ಇದು.

ಶನಿವಾರ ಸಂಜೆ ವೇಳೆ ಲಿಮ್ ಹೀ ಜಾಂಗ್ ಮತ್ತು ಬೇ ಸ್ಯಾನ್ ವೂ ಕ್ರಮವಾಗಿ ಅಗ್ರ ಎರಡು ಸ್ಥಾನಗಳಲ್ಲಿದ್ದರು. ಭಾನುವಾರ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡರು. ಯಾಂಗ್ಜುವಿನ ಲೇಕ್‌ವುಡ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಟೂರ್ನಿ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ.

ಪ್ರಶಸ್ತಿಗೆ ಮುತ್ತಿಕ್ಕಿದ ನಂತರ ಪಾರ್ಕ್ ಅವರು ತಂದೆಯನ್ನು ಅಪ್ಪಿಕೊಂಡುಭಾವುಕರಾದರು. ‘ಕಳೆದ ವರ್ಷಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಾಗದ್ದಕ್ಕೆ ತುಂಬ ಬೇಸರವಾಗಿತ್ತು. ಮುಂದಿನ ಟೂರ್ನಿಗಳಲ್ಲಿ ಸುಲಭವಾಗಿ ಜಯ ಗಳಿಸಲು ಈ ಗೆಲುವು ಪ್ರೇರಣೆಯಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.