ADVERTISEMENT

ಗಾಲ್ಫ್‌: ಐದಾ ತಿಮ್ಮಯ್ಯಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 14:30 IST
Last Updated 14 ಆಗಸ್ಟ್ 2025, 14:30 IST
ಪ್ರಶಸ್ತಿಯೊಂದಿಗೆ ಐದಾ ತಿಮ್ಮಯ್ಯ
ಪ್ರಶಸ್ತಿಯೊಂದಿಗೆ ಐದಾ ತಿಮ್ಮಯ್ಯ   

ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಐದಾ ತಿಮ್ಮಯ್ಯ ಅವರು ನೋಯ್ಡಾದಲ್ಲಿ ನಡೆದ ಐಜಿಯು ಉತ್ತರ ಭಾರತ ಮಹಿಳಾ ಮತ್ತು ಜೂನಿಯರ್ ಬಾಲಕಿಯರ ಚಾಂಪಿಯನ್‌ಷಿಪ್‌ನ ‘ಸಿ’ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 

ಕೊಡಗಿನ 11 ವರ್ಷದ ಐದಾ ಗುರುವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಉತ್ತಮ ಆರಂಭ ಪಡೆದು, ಆರು ಅಂಡರ್‌ಗಳಲ್ಲಿ 64 ಪಾಯಿಂಟ್ಸ್‌ ಕಲೆ ಹಾಕಿದರು. ಬುಧವಾರ ಐದು ಅಂಡರ್‌ಗಳಲ್ಲಿ 70 ಅಂಕ ಗಳಿಸಿದ್ದ ಅವರು ಒಟ್ಟಾರೆ 135 ಪಾಯಿಂಟ್ಸ್‌ ಗಳಿಸಿದರು. 

ರಾಜಸ್ಥಾನದ ಓಜಸ್ವಿನಿ ಸಾರಸ್ವತ್ ಒಟ್ಟು 141 ಅಂಕಗಳೊಂದಿಗೆ (71-70) ಅಂಕಗಳೊಂದಿಗೆ ರನ್ನರ್ ಅಪ್ ಆದರು. 

ADVERTISEMENT

ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನಲ್ಲಿ ರಾಹುಲ್ ಗಣಪತಿ ಅವರಿಂದ ತರಬೇತಿ ಪಡೆಯುತ್ತಿರುವ ಐದಾ, ಈಚೆಗೆ ಅಮೆರಿಕದ ಪೈನ್‌ಹರ್ಸ್ಟ್ ರೆಸಾರ್ಟ್‌ನಲ್ಲಿ ನಡೆದ ಯುಎಸ್ ಕಿಡ್ಸ್ ಗಾಲ್ಫ್ ವಿಶ್ವ ಚಾಂಪಿಯನ್‌ಷಿಪ್‌ನ ಬಾಲಕಿಯರ 11 ವರ್ಷದೊಳಗಿನವರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.