ADVERTISEMENT

ಯೂನಿವರ್ಸಿಟಿ ಗೇಮ್ಸ್‌: ಭಾರತಕ್ಕೆ ಮತ್ತೊಂದು ಚಿನ್ನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:34 IST
Last Updated 30 ಜುಲೈ 2023, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನ ಆರ್ಚರಿಯಲ್ಲಿ ಮಿಕ್ಸಡ್ ತಂಡ ವಿಭಾಗದಲ್ಲಿ ಭಾರತ ಚಿನ್ನ ಗೆದ್ದುಕೊಂಡಿತು.

ಅಮನ್‌ ಸೈನಿ ಮತ್ತು ಪ್ರಗತಿ ಅವರನ್ನೊಳಗೊಂಡ ಭಾರತ ತಂಡ ಭಾನುವಾರ ನಡೆದ ಫೈನಲ್‌ನಲ್ಲಿ 157–156 ರಿಂದ ಕೊರಿಯಾದ ಸುವಾ ಚೊ ಮತ್ತು ಸೆಂಗ್‌ಹುವಾ ಪಾರ್ಕ್‌ ಅವರನ್ನು ಮಣಿಸಿತು.

ಈ ಕೂಟದಲ್ಲಿ ಇದುವರೆಗೆ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 10 ಪದಕಗಳನ್ನು ಗೆದ್ದಿರುವ ಭಾರತ ತಂಡ, ನಾಲ್ಕನೇ ಸ್ಥಾನದಲ್ಲಿದೆ.

ADVERTISEMENT

ಆರ್ಚರಿಯಲ್ಲಿ ಭಾರತಕ್ಕೆ ಇನ್ನೆರಡು ಪದಕಗಳು ಬಂದವು. ಸಂಗಮ್‌ಪ್ರೀತ್‌ ಬಿಸ್ಲಾ, ಅಮನ್‌ ಸೈನಿ ಮತ್ತು ರಿಷಭ್‌ ಯಾದವ್‌ ಅವರನ್ನೊಳಗೊಂಡ ಪುರುಷರ ಕಾಂಪೌಂಡ್‌ ತಂಡ ಕಂಚು ಗೆದ್ದರೆ, ಪೂರ್ವಶಾ, ಪ್ರಗತಿ ಮತ್ತು ಅವನೀತ್‌ ಅವರನ್ನೊಳಗೊಂಡ ಮಹಿಳಾ ತಂಡ ಬೆಳ್ಳಿ ಗೆದ್ದುಕೊಂಡಿತು.

ಭಾರತದ ಶೂಟರ್‌ಗಳು ತಲಾ ಒಂದು ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.