ಲಿವರ್‌ಪೂಲ್: ಹೆವಿವೇಟ್ ಬಾಕ್ಸರ್ ನೂಪುರ್ ಶೆವೊರಾನ್ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಉಜ್ಬೇಕಿಸ್ತಾನದ ಓಲ್ಟಿನೊಯ್ ಸೊಟಿಮ್‌ಬೊಯೆವಾ ಅವರನ್ನು ಸೋಲಿಸಿ +80 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ಸ್ ತಲುಪಿದರು. ಆ ಮೂಲಕ ಈ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಖಚಿತವಾಯಿತು.
ಬಾಕ್ಸಿಂಗ್ ದಂತಕತೆ ಹವಾ ಸಿಂಗ್ ಅವರ ಮೊಮ್ಮಗಳಾದ 26 ವರ್ಷ ವಯಸ್ಸಿನ ನೂಪುರ್ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದರು. 20 ವರ್ಷ ವಯಸ್ಸಿನ ಸೊಟಿಮ್‌ಬೊಯೆವಾ ವಿರುದ್ಧದ ಈ ಸೆಣಸಾಟದಲ್ಲಿ 4–1 ರಿಂದ ಗೆದ್ದರು. ಇದು (+80 ಕೆ.ಜಿ) ಒಲಿಂಪಿಕ್ಸ್‌ಯೇತರ ಸ್ಪರ್ಧೆಯಾಗಿದೆ. ಇಲ್ಲಿ 10 ಮಂದಿ ಬಾಕ್ಸರ್‌ಗಳು ಮಾತ್ರ ಕಣದಲ್ಲಿದ್ದರು.
ಮಂಗಳವಾರ ತಡರಾತ್ರಿ ಜಾದುಮಣಿ ಸಿಂಗ್ (48 ಕೆ.ಜಿ), ಅವಿನಾಶ್ ಜಮವಾಲ್ (65 ಕೆ.ಜಿ) ಅವರು ಪುರುಷರ ವಿಭಾಗದ ಎಂಟರ ಘಟ್ಟಕ್ಕೆ ತಲುಪಿದ್ದರು. ಜುಗ್ನೂ ಅಹ್ಲಾವತ್ ಅವರ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿತು. ಅವರು 85 ಕೆ.ಜಿ. ವಿಭಾಗದಲ್ಲಿ ಸ್ಕಾಟ್ಲೆಂಡ್‌ನ ರಾಭರ್ಟ್ ಮೆಕ್‌ನುಲ್ಟಿ ಅವರಿಗೆ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.