ADVERTISEMENT

ಮರ್ಸಿಡೀಸ್‌ ಗಾಲ್ಫ್‌: ಸಾಹಿಲ್‌, ಮುರಾದ್‌ ಅರ್ಹತೆ

ಪಿಟಿಐ
Published 5 ಏಪ್ರಿಲ್ 2019, 18:52 IST
Last Updated 5 ಏಪ್ರಿಲ್ 2019, 18:52 IST

ಪುಣೆ: ಭಾರತದ ಸಾಹಿಲ್‌ ಜೈನ್‌, ಮುರಾದ್‌ ತಾಲಿಬ್‌ ಮತ್ತು ಸತೀಶ್‌ ಚೀತಿ ಅವರು ಮುಂಬರುವ ಮರ್ಸಿಡೀಸ್‌ ಟ್ರೋಫಿ ವಿಶ್ವ ಫೈನಲ್ಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದಾರೆ.

ಮರ್ಸಿಡೀಸ್‌ ಟ್ರೋಫಿ ಈ ವರ್ಷದ ಅಕ್ಟೋಬರ್‌ನಲ್ಲಿ ಜರ್ಮನಿಯ ಸ್ಟಟ್‌ಗರ್ಟ್‌ನಲ್ಲಿ ನಡೆಯಲಿದೆ.

ಪುಣೆಯ ಆಕ್ಸ್‌ಫರ್ಡ್‌ ಗಾಲ್ಫ್‌ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ನ್ಯಾಷನಲ್‌ ಫೈನಲ್ಸ್‌ನ ಹ್ಯಾಂಡಿಕ್ಯಾಪ್‌ ಸಿಎಟಿ ‘ಎ’ (3–10) ವಿಭಾಗದಲ್ಲಿ ಸಾಹಿಲ್‌ ಪ್ರಶಸ್ತಿ ಗೆದ್ದರು. ಅವರು ಒಟ್ಟು 39 ಸ್ಕೋರ್‌ ಕಲೆಹಾಕಿದರು.

ADVERTISEMENT

ಸಿಎಟಿ ‘ಬಿ’ (11–17) ವಿಭಾಗದಲ್ಲಿ ಮುರಾದ್‌ ಚಾಂಪಿಯನ್‌ ಆದರು. ಅವರು ಒಟ್ಟು 37 ಸ್ಕೋರ್‌ ಗಳಿಸಿದರು. ಮುರಾದ್‌, ಎರಡನೇ ಬಾರಿ ಮರ್ಸಿಡೀಸ್‌ ಟ್ರೋಫಿಗೆ ಅರ್ಹತೆ ಗಳಿಸಿದ್ದಾರೆ.

ಸಿಎಟಿ ‘ಸಿ’ (18–24) ವಿಭಾಗದಲ್ಲಿ ಸತೀಶ್‌ ಕಿರೀಟ ಮುಡಿಗೇರಿಸಿಕೊಂಡರು. ಅವರು 36 ಸ್ಕೋರ್‌ ಸಂಗ್ರಹಿಸಿದರು.

ಕೋಲ್ಕತ್ತದ ಹೇಮಂತ್‌ ಗೋಯೆಂಕಾ ಅವರು ‘ಸ್ಟ್ರೈಟೆಸ್ಟ್‌ ಡ್ರೈವ್‌ ಗ್ರ್ಯಾಂಡ್‌ ಲಕ್ಕಿ’ ಪ್ರಶಸ್ತಿ ಜಯಿಸಿದರು. ಅವರು ಮುಂಬರುವ ಬ್ರಿಟೀಸ್‌ ಓಪನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಉಮೇಶ್‌ ಎನ್‌.ವಿ.ಭಟ್‌, ಸಿಎಟಿ ‘ಬಿ’ ವಿಭಾಗದಲ್ಲಿ ರನ್ನರ್‌ ಅಪ್‌ ಆದರು. ಅವರು ಒಟ್ಟು 32 ಸ್ಕೋರ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.