ADVERTISEMENT

ವಿಶ್ವಕಪ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

ಪಿಟಿಐ
Published 5 ಫೆಬ್ರುವರಿ 2019, 16:01 IST
Last Updated 5 ಫೆಬ್ರುವರಿ 2019, 16:01 IST

ಲಾಸನ್‌: ಮುಂಬರುವ ಹಾಕಿ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದ್ದು, ಈ ಸಂಬಂಧ ಬಿಡ್‌ ಸಲ್ಲಿಸಿದೆ.

ಈ ವಿಷಯವನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಮಂಗಳವಾರ ಬಹಿರಂಗಪಡಿಸಿದೆ.

2023ರ ಜನವರಿ 13ರಿಂದ 29ರ ಅವಧಿಯಲ್ಲಿ ಪುರುಷರ ಇಲ್ಲವೇ ಮಹಿಳಾ ವಿಶ್ವಕಪ್‌ ನಡೆಸಲು ಸಿದ್ಧವಿರುವುದಾಗಿ ಭಾರತವು ಬಿಡ್‌ನಲ್ಲಿ ಉಲ್ಲೇಖಿಸಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಕೂಡಾ ಇದೇ ಅವಧಿಯಲ್ಲಿ ಟೂರ್ನಿ ಆಯೋಜಿಸಲು ಆಸಕ್ತಿ ಹೊಂದಿರುವುದಾಗಿ ತಾವು ಸಲ್ಲಿಸಿರುವ ಬಿಡ್‌ನಲ್ಲಿ ಹೇಳಿವೆ.

ADVERTISEMENT

2022ರ ಜುಲೈ 1ರಿಂದ 17ರ ಅವಧಿಯಲ್ಲಿ ಟೂರ್ನಿ ಆಯೋಜಿಸಲು ಸ್ಪೇನ್‌, ಮಲೇಷ್ಯಾ ಮತ್ತು ಜರ್ಮನಿ ಆಸಕ್ತಿ ತೋರಿದ್ದು ಈ ಸಂಬಂಧ ಬಿಡ್‌ ಕೂಡಾ ಸಲ್ಲಿಸಿವೆ.

‘ಸದ್ಯದಲ್ಲೇ ಬಿಡ್‌ಗಳ ಪರಿಶೀಲನೆ ನಡೆಸುತ್ತೇವೆ. ಯಾವ ದೇಶಕ್ಕೆ ಆತಿಥ್ಯದ ಜವಾಬ್ದಾರಿ ನೀಡಬೇಕೆಂಬುದನ್ನು ಎಫ್‌ಐಎಚ್‌ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಈ ವರ್ಷದ ಜೂನ್‌ನಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಎಫ್‌ಐಎಚ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಥಿಯೆರಿ ವಿಯೆಲ್‌ ತಿಳಿಸಿದ್ದಾರೆ.

ಭಾರತವು ಈಗಾಗಲೇ ಮೂರು ಬಾರಿ ಪುರುಷರ ವಿಶ್ವಕಪ್‌ ಟೂರ್ನಿಯನ್ನು ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.