
ಪಿಟಿಐ
ಇಪೊ (ಮಲೇಷ್ಯಾ): ಭಾರತ ತಂಡ, ಸುಲ್ತಾನ್ ಅಜ್ಞಾನ್ ಷಾ ಕಪ್ ಹಾಕಿ ಪಂದ್ಯದಲ್ಲಿ ಮಂಗಳವಾರ ಕೆಚ್ಚಿನಿಂದ ಹೋರಾಟ ತೋರಿದರೂ ಅಂತಿಮವಾಗಿ 2–3 ಗೋಲುಗಳಿಂದ ಪ್ರಬಲ ಬೆಲ್ಜಿಯಂ ತಂಡಕ್ಕೆ ಮಣಿಯಬೇಕಾಯಿತು.
ಅಭಿಷೇಕ್ (33ನೇ ನಿಮಿಷ), ಶಿಲಾನಂದ ಲಾಕ್ರಾ (57ನೇ ನಿಮಿಷ) ಅವರು ಭಾರತ ತಂಡದ ಪರ ಗೋಲು ಗಳಿಸಿದರು. ಬೆಲ್ಜಿಯಮ್ ಪರ ರೋಮನ್ ದುವೆಕೋಟ್ (17 ಮತ್ತು 57ನೇ ನಿಮಿಷ) ಮತ್ತು ನಿಕೋಲಸ್ ಡಿ ಕೆರ್ಪೆಲ್ 45ನೇ ನಿಮಿಷ ಚೆಂಡನ್ನು ಗುರಿ ತಲುಪಿಸಿದರು.
ಆರು ತಂಡಗಳ ಈ ಟೂರ್ನಿಯಲ್ಲಿ, ಸಂಜಯ್ ನೇತೃತ್ವದ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ದಕ್ಷಿಣ ಕೊರಿಯಾ ತಂಡವನ್ನು 1–0 ಗೋಲಿನಿಂದ ಸೋಲಿಸಿತ್ತು.
ಭಾರತ ತಂಡವು ಬುಧವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.