
ಪಿಟಿಐನವದೆಹಲಿ: ಮೂರು ರಾಷ್ಟ್ರಗಳ ನಡುವೆ ನಡೆಯುವ ಮಹಿಳಾ ಹಾಕಿ ಟೂರ್ನಿಗೆ 18 ಸದಸ್ಯರ ಭಾರತ ಜೂನಿಯರ್ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ.
ತಂಡದ ನಾಯಕತ್ವವನ್ನು ಸುಮನ್ ದೇವಿ ತೌಡಮ್ ವಹಿಸಿಕೊಂಡಿದ್ದಾರೆ. ಡಿಸೆಂಬರ್ 3ರಿಂದ 8ರವರೆಗೆ ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಟೂರ್ನಿ ಆಯೋಜನೆಯಾಗಿದೆ.
ಭಾರತ ಅಲ್ಲದೆ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಟೂರ್ನಿಯಲ್ಲಿ ಆಡಲಿವೆ. ಡಿ.4ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಇಷಿಕಾ ಚೌಧರಿ ಭಾರತ ತಂಡದ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿರುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.