ADVERTISEMENT

ಬ್ಯಾಡ್ಮಿಂಟನ್‌: ಸೆಮಿಗೆ ಅಕ್ಸೆಲ್ಸನ್‌, ಯಮಗುಚಿ

ಪಿಟಿಐ
Published 20 ಜನವರಿ 2023, 22:07 IST
Last Updated 20 ಜನವರಿ 2023, 22:07 IST
ಅಕಾನೆ ಯಮಗುಚಿ ಆಟದ ಪರಿ– ಪಿಟಿಐ ಚಿತ್ರ
ಅಕಾನೆ ಯಮಗುಚಿ ಆಟದ ಪರಿ– ಪಿಟಿಐ ಚಿತ್ರ   

ನವದೆಹಲಿ: ಎರಡು ಬಾರಿಯ ವಿಶ್ವ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್ಸನ್ ಮತ್ತು ಜಪಾನ್‌ನ ಅಕಾನೆ ಯಮಗುಚಿ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದರು.

ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಡೆನ್ಮಾರ್ಕ್‌ನ ಅಕ್ಸೆಲ್ಸನ್‌ ತಮ್ಮದೇ ದೇಶದ ರಾಸ್ಮಸ್‌ ಗೆಮೆ ಎದುರು ಸ್ಪರ್ಧಿಸಿದ್ದರು. ಆದರೆ ಅಕ್ಸೆಲ್ಸನ್‌ ಮೊದಲ ಗೇಮ್‌ನಲ್ಲಿ 16–8ರಿಂದ ಮುನ್ನಡೆಯಲ್ಲಿದ್ದಾಗ ಗೆಮೆ ಗಾಯಗೊಂಡು ಹಿಂದೆ ಸರಿದರು. ವೀಲ್‌ಚೇರ್‌ ಮೂಲಕ ಅವರನ್ನು ಅಂಗಣದಿಂದ ಕರೆದುಕೊಂಡು ಹೋಗಲಾಯಿತು. ಗೆಮೆ ಅವರು ಗುರುವಾರ ಹಾಲಿ ಚಾಂಪಿಯನ್‌, ಭಾರತದ ಲಕ್ಷ್ಯ ಸೇನ್ ಎದುರು ಗೆದ್ದಿದ್ದರು.

ಕ್ವಾರ್ಟರ್‌ಫೈನಲ್‌ನ ಮತ್ತೊಂದು ಹಣಾಹಣಿಯಲ್ಲಿ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ ಗಿಂಟಿಂಗ್‌ 21-11, 17-21, 21-18ರಿಂದ ಚೀನಾದ ಲಿವು ಶಿ ಫೆಂಗ್ ಎದುರು ಗೆದ್ದರು.

ADVERTISEMENT

ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಅಕಾನೆ 21-17, 14-21, 21-19ರಿಂದ ಸ್ಪೇನ್‌ನ ಕರೋಲಿನಾ ಮರಿನ್ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.