
ಮನ್ಸುಖ್ ಮಾಂಡವೀಯ
–ಎಕ್ಸ್ ಚಿತ್ರ
ನವದೆಹಲಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಂಘಟನೆಯಲ್ಲಿ ಆದ ಲೋಪಗಳ ಬಗ್ಗೆ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಅವ್ಯವಸ್ಥೆ
ಪುನರಾವರ್ತನೆಯಾಗದಂತೆ ತಡೆಗಟ್ಟಲು ಪರಿಹಾರಾತ್ಮಕ ಕ್ರಮಗಳ ಕುರಿತು ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸೋಮವಾರ ಸಮಾಲೋಚನೆ ನಡೆಸಿದರು.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದ ಆಡಳಿತಾಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ಕಳೆದ ವಾರ ನಡೆದ ಟೂರ್ನಿಯ ವೇಳೆ ಆದ ಗೊಂದಲಗಳಿಗೆ ವಿವರಣೆ ನೀಡುವಂತೆ ಸೂಚಿಸಿದರು.
2036ರ ಒಲಿಂಪಿಕ್ಸ್ ಬಿಡ್ ಯತ್ನದಲ್ಲಿರುವ ಭಾರತಕ್ಕೆ ಟೂರ್ನಿಯಲ್ಲಿ ಆದ ಅವ್ಯವಸ್ಥೆ ಮುಜುಗರ ಉಂಟುಮಾಡಿದೆ. ಪಂದ್ಯದ ವೇಳೆ ಪಕ್ಷಿಗಳು ಹಿಕ್ಕೆ ಹಾಕಿದ ಪ್ರಕರಣ, ಕೋತಿಯೊಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿ ರುವುದು, ನಿರ್ವಹಣೆಯಿಲ್ಲದ ಕ್ರೀಡಾ ಸಲಕರಣೆಗಳು ಮತ್ತು ಶೌಚಾಲಯಗಳ ಬಗ್ಗೆ ಆಟಗಾರರು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.