ADVERTISEMENT

ಹಾಕಿ: ಪಾಕ್‌ ವಿರುದ್ಧ ಡ್ರಾ ಸಾಧಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:42 IST
Last Updated 14 ಅಕ್ಟೋಬರ್ 2025, 16:42 IST
ಭಾರತ (ಬಲ) ಮತ್ತು ಪಾಕಿಸ್ತಾನ ಹಾಕಿ ತಂಡಗಳ ಆಟಗಾರರ ನಡುವೆ ಚೆಂಡಿಗಾಗಿ ಸೆಣಸಾಟ –ಎಕ್ಸ್‌ ಚಿತ್ರ
ಭಾರತ (ಬಲ) ಮತ್ತು ಪಾಕಿಸ್ತಾನ ಹಾಕಿ ತಂಡಗಳ ಆಟಗಾರರ ನಡುವೆ ಚೆಂಡಿಗಾಗಿ ಸೆಣಸಾಟ –ಎಕ್ಸ್‌ ಚಿತ್ರ   

ಜೋಹರ್‌ (ಮಲೇಷ್ಯಾ): ಭಾರತ ಜೂನಿಯರ್‌ ಪುರುಷರ ಹಾಕಿ ತಂಡವು ಮಂಗಳವಾರ ನಡೆದ ಸುಲ್ತಾನ್ ಆಫ್ ಜೋಹರ್ ಕಪ್‌ ಟೂರ್ನಿಯ ಗುಂಪು ಹಂತದ ತನ್ನ ಮೂರನೇ ಪಂದ್ಯದಲ್ಲಿ 3–3ರಿಂದ ಪಾಕಿಸ್ತಾನ ವಿರುದ್ಧ ಡ್ರಾ ಸಾಧಿಸಿತು. 

ಒಂದು ಹಂತದಲ್ಲಿ ಎರಡು ಗೋಲುಗಳ ಹಿನ್ನಡೆಯಲ್ಲಿದ್ದ ಭಾರತ ತಂಡವು ತೀವ್ರ ಒತ್ತಡದಲ್ಲಿತ್ತು. ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಆಟಗಾರರು 10 ನಿಮಿಷಗಳ ಅಂತರದಲ್ಲಿ ಮೂರು ಗೋಲು ದಾಖಲಿಸಿ ಡ್ರಾ ಮಾಡಿಕೊಂಡರು. ಈ ಮೂಲಕ  ಟೂರ್ನಿಯಲ್ಲಿ ಅಜೇಯವಾಗಿ ಉಳಿದರು.

ಅರೈಜೀತ್ ಸಿಂಗ್ ಹುಂದಾಲ್ (43ನೇ ನಿಮಿಷ), ಸೌರಭ್ ಆನಂದ್ ಕುಶ್ವಾಹ (47ನೇ), ಮನ್‌ಮೀತ್ ಸಿಂಗ್ (53ನೇ) ಭಾರತದ ಪರ ಗೋಲು ಗಳಿಸಿದರು. ಪಾಕಿಸ್ತಾನದ ಪರ ಹನ್ನನ್ ಶಾಹಿದ್ (5ನೇ) ಮತ್ತು ಸುಫ್ಯಾನ್ ಖಾನ್ (39ನೇ ಮತ್ತು 55ನೇ) ಚೆಂಡನ್ನು ಗುರಿ ಸೇರಿಸಿದರು. 

ADVERTISEMENT

ಭಾರತ ತಂಡವು ಮೊದಲ ಪಂದ್ಯದಲ್ಲಿ 3–2ರಿಂದ ಗ್ರೇಟ್ ಬ್ರಿಟನ್ ವಿರುದ್ಧ; ಎರಡನೇ ಪಂದ್ಯದಲ್ಲಿ  4–2ರಿಂದ ನ್ಯೂಜಿಲೆಂಡ್ ಎದುರು ಜಯ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.