ಭುವನೇಶ್ವರ: ಭಾರತ ಪುರುಷರ ತಂಡ ಶನಿವಾರ ನಡೆದ ಪಂದ್ಯದಲ್ಲಿ 5–2 ಗೋಲುಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಶುಭಾರಂಭ ಮಾಡಿತು.
ಕಳಿಂಗ ಕ್ರೀಡಾಂಗಣದಲ್ಲಿ ರೂಪಿಂದರ್ ಪಾಲ್ (12, 46ನೇ ನಿಮಿಷ), ಗುರ್ಜಂತ್ ಸಿಂಗ್ (1ನೇ ನಿಮಿಷ), ಮನದೀಪ್ ಸಿಂಗ್ (34ನೇ), ಲಲಿತ್ ಉಪಾಧ್ಯಾಯ (36ನೇ) ಅವರು ಭಾರತಕ್ಕೆ ಗೋಲು ಗಳನ್ನು ತಂದಿತ್ತರು.
ಜಿಪ್ ಜೆನ್ಸೆನ್ (14ನೇ ನಿಮಿಷ) ಮತ್ತು ಜೆರೋನ್ ಹರ್ಟ್ಸ್‌ಬರ್ಗರ್ (28ನೇ) ಅವರು ಪ್ರವಾಸಿ ತಂಡದ ಸೋಲಿನ ಅಂತರ ಕಡಿಮೆ ಮಾಡಿದರು. ಭಾನುವಾರ ಇದೇ ತಂಡದ ಎದುರು ಭಾರತ ಎರಡನೇ ಪಂದ್ಯ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.