ADVERTISEMENT

ಟೆನಿಸ್‌ ಟೂರ್ನಿ: ಅಂಕಿತಾ, ಋತುಜಾ ಮಿಂಚು: ಭಾರತಕ್ಕೆ ಜಯ

ಬಿಲ್ಲಿ ಜೀನ್‌ ಕಿಂಗ್ ಕಪ್ ಟೆನಿಸ್‌ ಟೂರ್ನಿ

ಪಿಟಿಐ
Published 15 ಏಪ್ರಿಲ್ 2022, 12:20 IST
Last Updated 15 ಏಪ್ರಿಲ್ 2022, 12:20 IST
ಅಂಕಿತಾ ರೈನಾ– ಎಎಫ್‌ಪಿ ಚಿತ್ರ
ಅಂಕಿತಾ ರೈನಾ– ಎಎಫ್‌ಪಿ ಚಿತ್ರ   

ಅಂಟಲ್ಯಾ, ಟರ್ಕಿ: ಭಾರತ ತಂಡವು ಬಿಲ್ಲಿ ಜೀನ್ ಕಿಂಗ್ ಕಪ್ ಟೂರ್ನಿಯಲ್ಲಿ ಮೊದಲ ಜಯ ಗಳಿಸಿದೆ. ಗುರುವಾರ ರಾತ್ರಿ ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ 2–0ಯಿಂದ ಟರ್ಕಿ ತಂಡದ ಎದುರು ಮೇಲುಗೈ ಸಾಧಿಸಿತು.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಹಣಾಹಣಿಯಲ್ಲಿ ಭಾರತದ ಋತುಜಾ ಭೋಸ್ಲೆ 6–4, 6–1ರಿಂದ ಬೀಟ್‌ರೈಸ್‌ ಗುಮುಲ್ಯ ಅವರನ್ನು ಸೋಲಿಸಿದರು. 23 ನಿಮಿಷಗಳ ಹಣಾಹಣಿಯಲ್ಲಿ ಋತುಜಾ ಅವರಿಗೆ ಗೆಲುವು ಒಲಿಯಿತು.

52 ನಿಮಿಷಗಳ ಕಾಲ ನಡೆದ ಎರಡನೇ ಪಂದ್ಯದಲ್ಲಿ ಅಂಕಿತಾ ರೈನಾ6-1, 6-2ರಿಂದ ಆಲ್ದಿಲಾ ಸುಜಿಯಾದಿ ಅವರನ್ನು ಮಣಿಸಿದರು.

ADVERTISEMENT

ಏಷ್ಯಾ/ಒಸೀನಿಯಾ ಗುಂಪಿನ ಮೊದಲ ಪಂದ್ಯದಲ್ಲಿ ಚೀನಾ ತಂಡದ ಎದುರು ಭಾರತ 0–3ರಿಂದ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.