ಹಾಂಗ್‌ಝೌ (ಚೀನಾ): ಅಜೇಯ ಓಟವನ್ನು ಮುಂದುವರಿಸಿದ ಭಾರತ ತಂಡ, ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬುಧವಾರ ದಕ್ಷಿಣ ಕೊರಿಯಾ ತಂಡನವನ್ನು 4–2 ಗೋಲುಗಳಿಂದ ಸೊಲಿಸಿತು.
ವೈಷ್ಣವಿ ವಿಠ್ಠಲ್ ಫಾಲ್ಕೆ (2ನೇ ನಿಮಿಷ), ಸಂಗೀತಾ ಕುಮಾರಿ (33ನೇ ನಿಮಿಷ), ಲಾಲ್ರೆಮ್‌ಸಿಯಾಮಿ (40ನೇ ನಿಮಿಷ) ಮತ್ತು ರುತುಜಾ ದಾದಾಸೊ ಪಿಸಾಳ್ (59ನೇ ನಿಮಿಷ) ಭಾರತ ತಂಡದ ಪರ ಗೋಲುಗಳನ್ನು ಗಳಿಸಿದರು. ಯುಜಿನ್ ಕಿಮ್ ಅವರು ಕೊರಿಯಾಕ್ಕೆ ತಂಡಕ್ಕೆ 33 ಮತ್ತು 53ನೇ ನಿಮಿಷ ಗೋಲುಗಳನ್ನು ತಂದಿತ್ತರು.
ಭಾರತ ವನಿತೆಯರು ಗುರುವಾರ ನಡೆಯುವ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು ಎದುರಿಸಲಿದ್ದಾರೆ.
ಭಾರತವು ಏಳು ಪಾಯಿಂಟ್‌ಗಳೊಡನೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೂಪರ್ ಫೋರ್ ಹಂತಕ್ಕೆ ಮುನ್ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.