ADVERTISEMENT

ಹಾಕಿ: ಐರ್ಲೆಂಡ್‌ಗೆ ಆಘಾತ ನೀಡಿದ ಭಾರತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:52 IST
Last Updated 3 ಫೆಬ್ರುವರಿ 2019, 19:52 IST

ಮರ್ಸಿಯಾ, ಸ್ಪೇನ್‌: ಭಾರತದ ಮಹಿಳಾ ಹಾಕಿ ತಂಡದವರು ಭಾನುವಾರ ಸ್ಮರಣೀಯ ಗೆಲುವು ದಾಖಲಿಸಿದ್ದಾರೆ.

ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ 3–0 ಗೋಲುಗಳಿಂದ ಐರ್ಲೆಂಡ್‌ ತಂಡಕ್ಕೆ ಆಘಾತ ನೀಡಿದೆ. ಐರ್ಲೆಂಡ್‌ ತಂಡ ವಿಶ್ವಕಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿತ್ತು.

ಭಾರತದ ನವಜ್ಯೋತ್‌ ಕೌರ್‌ 13ನೇ ನಿಮಿಷದಲ್ಲಿ ಖಾತೆ ತೆರೆದರು. 26ನೇ ನಿಮಿಷದಲ್ಲಿ ರೀನಾ ಖೋಕರ್‌ ಗೋಲು ಹೊಡೆದು ತಂಡ 2–0 ಮುನ್ನಡೆ ಪಡೆಯಲು ನೆರವಾದರು.

ADVERTISEMENT

ಅಂತಿಮ ಕ್ವಾರ್ಟರ್‌ನಲ್ಲಿ ಸಿಕ್ಕ ‘ಪೆನಾಲ್ಟಿ ಕಾರ್ನರ್‌’ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್‌ ಕೌರ್‌ ತಂಡದ ಸಂಭ್ರಮ ಇಮ್ಮಡಿಸುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.