ADVERTISEMENT

ಬಾಕ್ಸಿಂಗ್‌ ವಿಶ್ವ ಅರ್ಹತಾ ಟೂರ್ನಿ: ಒಲಿಂಪಿಕ್ಸ್‌ ಕೋಟಾಕ್ಕೆ ಶಿವ, ದೀಪಕ್ ಯತ್ನ

ಪಿಟಿಐ
Published 2 ಮಾರ್ಚ್ 2024, 16:26 IST
Last Updated 2 ಮಾರ್ಚ್ 2024, 16:26 IST
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅನುಭವಿ ಬಾಕ್ಸರ್‌ಗಳಾದ ಶಿವ ಥಾಪಾ, ದೀಪಕ್‌ ಭೋರಿಯಾ ಮತ್ತು ನಿಶಾಂತ್ ದೇವ್‌ ಅವರು ಭಾನುವಾರ ಇಟಲಿಯ ಬುಸ್ಟೊ ಅರ್ಸಿಜಿಯೊದಲ್ಲಿ ಭಾನುವಾರ ಆರಂಭವಾಗಲಿರುವ ಮೊದಲ ವಿಶ್ವ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾದಲ್ಲಿ ಸ್ಥಾನ ಪಡೆಯುವ ಯತ್ನದಲ್ಲಿದ್ದಾರೆ.

ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಕಾರ್ಯನಿರ್ವಾಹಕ ಮಂಡಳಿ ನೇಮಿಸಿರುವ ಅಡ್‌ಹಾಕ್‌ ಸಮಿತಿಯಾದ ಪ್ಯಾರಿಸ್‌ ಬಾಕ್ಸಿಂಗ್‌ ಯೂನಿಟ್‌ (ಪಿಬಿಯು) ನಡೆಸುತ್ತಿದೆ. ಭಾರತದ ಏಳು ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇಲ್ಲಿ ಯತ್ನಿಸಲಿದ್ದಾರೆ.‌ ಈ ಟೂರ್ನಿಯಿಂದ ಒಲಿಂಪಿಕ್ಸ್‌ಗೆ 49 ಕೋಟಾ ಸ್ಥಾನಗಳಿವೆ.

ಪಂದ್ಯಾವಳಿಯಲ್ಲಿ 49 ಕೋಟಾ ಸ್ಥಾನಗಳಿವೆ ಮತ್ತು ಸೆಮಿಫೈನಲ್ ತಲುಪಿದ ನಂತರ ಬಾಕ್ಸರ್‌ಗಳಿಗೆ ಪ್ಯಾರಿಸ್ ಟಿಕೆಟ್ ಖಾತರಿಪಡಿಸಲಾಗುತ್ತದೆ.

ADVERTISEMENT

ಮಹಿಳೆಯರ 60 ಕೆಜಿ ವಿಭಾಗದಲ್ಲಿ, ಕೇವಲ ಮೂರು ಸ್ಥಾನಗಳು ಮಾತ್ರ ಲಭ್ಯ ಇರುವುದರಿಂದ ಒಲಿಂಪಿಕ್ ಸ್ಥಾನಗಳನ್ನು ನಿರ್ಧರಿಸಲು ಸೋತ ಸೆಮಿಫೈನಲಿಸ್ಟ್‌ಗಳ ನಡುವೆ ‘ಬಾಕ್ಸ್ ಆಫ್’ ನಡೆಯಲಿದೆ.

2023ರ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತರಾದ ದೀಪಕ್ ಭೋರಿಯಾ (51 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ) ಮತ್ತು ದೇವ್ (71 ಕೆಜಿ) ಅವರಿಗೆ ಪದಕ ಗೆಲ್ಲುವ ವಿಶ್ವಾಸ ಇದೆ. ಅಲ್ಲದೇ ಆರು ಬಾರಿ ಏಷ್ಯನ್ ಚಾಂಪಿಯನ್‌ಷಿಪ್ ಪದಕ ವಿಜೇತ ಶಿವ ಥಾಪಾ (63.5 ಕೆಜಿ) ಮತ್ತು ಮಾಜಿ ಏಷ್ಯನ್ ಚಾಂಪಿಯನ್ ಸಂಜೀತ್ (92 ಕೆಜಿ) ಅವರ ಮೇಲೂ ನಿರೀಕ್ಷೆಯ ಭಾರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.