ಕುಶ್ ಮೈನಿ
ನವದೆಹಲಿ: ಭಾರತದ ಯುವ ಚಾಲಕ ಕುಶ್ ಮೈನಿ ಅವರು ಫಾರ್ಮುಲಾ 1 ಟೆಸ್ಟ್ ಹಾಗೂ ಮೀಸಲು ಚಾಲಕರಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಆಲ್ಪೈನ್ ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಕುಶ್ ಮೈನಿ ಎಫ್1ಗೆ ಸೇರಿದ ಮೂರನೇ ಭಾರತೀಯ ಚಾಲಕರಾಗಿದ್ದಾರೆ. ನರೇನ್ ಕಾರ್ತಿಕೇಯನ್ ಮತ್ತು ಕರುಣ್ ಚಂದೋಕ್ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಕುಶ್ ಮೈನಿ ಫಾರ್ಮುಲಾ 2ರಲ್ಲಿ ಚಾಲಕರಾಗಿದ್ದರು. ಹಂಗೇರಿಯನ್ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ತಮ್ಮ ವೃತ್ತಿಜೀವನದಲ್ಲೇ ಚೊಚ್ಚಲ ಫಾರ್ಮುಲಾ 2 ಸ್ಪ್ರಿಂಟ್ ರೇಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.