ADVERTISEMENT

ವಿಶ್ವ ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ಕೂಟ: ಗ್ರೀಕೊ ರೋಮನ್ ಪೈಲ್ವಾನರು ವಿಫಲ

ಪಿಟಿಐ
Published 9 ಮೇ 2024, 16:29 IST
Last Updated 9 ಮೇ 2024, 16:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಸ್ತಾಂಬುಲ್ (ಟರ್ಕಿ): ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು, ಗುರುವಾರ ಆರಂಭವಾದ ವಿಶ್ವ ಒಲಿಂಪಿಕ್‌ ಗೇಮ್ಸ್‌ ಅರ್ಹತಾ ಕೂಟದ ಮೊದಲ ದಿನ ಗಮನಸೆಳೆಯಲಿಲ್ಲ.

ಸುಮಿತ್‌ (60 ಕೆ.ಜಿ), ಆಶು (67 ಕೆ.ಜಿ), ವಿಕಾಸ್‌ (77 ಕೆ.ಜಿ), ಸುನಿಲ್ ಕುಮಾರ್ (87 ಕೆ.ಜಿ) ಮತ್ತು ನಿತೇಶ್ (97 ಕೆ.ಜಿ) ಅವರು ತಮ್ಮ ವಿಭಾಗದ ಸ್ಪರ್ಧೆಗಳಲ್ಲಿ ಸೋತರು. ಹೀಗಾಗಿ ಈಗ ಫ್ರೀಸ್ಟೈಲ್ ಕುಸ್ತಿಪಟುಗಳಿಂದ ಉತ್ತಮ ಪ್ರದರ್ಶನದ ನಿರೀಕ್ಷೆ ಹೊಂದಲಾಗಿದೆ.

ADVERTISEMENT

ಸುಮಿತ್ 60 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ರುಮೇನಿಯಾದ ಎದುರಾಳಿ ರಝ್ವಾನ್ ಅರ್ನಾಟ್ ಅವರಿಗೆ ತಾಂತ್ರಿಕ ಆಧಾರದಲ್ಲಿ 10–0ಯಿಂದ ಸೋತರು. ಆಶು, ನಾರ್ವೆಯ ಎದುರಾಳಿ ಹಾವರ್ಡ್‌ ಯಾರ್ಗೆನ್ಸನ್ ಎದುರು 5–4 ರಲ್ಲಿ ಜಯಗಳಿಸಿದರೂ, ನಂತರದ ಸುತ್ತಿನಲ್ಲಿ ಏಳನೇ ಕ್ರಮಾಂಕದ ಕ್ರಿಟ್ಜಿನ ವಾಂಕ್‌ಝಾ ಅವರಿಗೆ ತಾಂತ್ರಿಕ ಕೌಶಲದ ಆಧಾರದಲ್ಲಿ 10–0ಯಿಂದ ಸೋತರು.

ವಿಕಾಸ್‌ ಮೊದಲ ಸುತ್ತಿನಲ್ಲಿ ಇಟಲಿಯ ರಿಕಾರ್ಡೊ ಅಬ್ರೆಸಿಯಾ ಎದುರು ಜಯಗಳಿಸಿದರೂ, ನಂತರ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಜಾರ್ಜಿಯಾದ ಲುರಿ ಲೊಮಾಡ್ಜೆ ಅವರಿಗೆ 0–8 ರಲ್ಲಿ ಮಣಿದರು.

87 ಕೆ.ಜಿ. ವಿಭಾಗದಲ್ಲಿ ಸುನಿಲ್ ಕುಮಾರ್ 3–1 ರಿಂದ ಜೋಸ್ ಆಂಡ್ರೆಸ್‌ ವರ್ಗಾಸ್ ಅವರನ್ನು ಸೋಲಿಸಿದರು. ಆದರೆ ನಂತರ ಅಜರ್‌ಬೈಜಾನ್‌ನ ರಫೀಖ್ ಹುಸೆಯ್ನೊವ್ ಅವರಿಗೆ 4–3ರಲ್ಲಿ ಮಣಿದರು. ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತರಾದ ರಫೀಕ್ ಅತಿ ಕಡಿಮೆ ಅಂತರದಲ್ಲಿ ಗೆದ್ದು ಕ್ವಾರ್ಟರ್‌ಫೈನಲ್ ತಲುಪಿದರು.

97 ಕೆ.ಜಿ ವಿಭಾಗದಲ್ಲಿ ನಿತೇಶ್, ಕ್ವಾಲಿಫಿಕೇಷನ್ ಸುತ್ತಿನಲ್ಲೇ ಹೊರಬಿದ್ದರು. ಅವರು ಪೋಲೆಂಡ್‌ನ ತಡೆಯುಸ್ ಮಿಚಲಿಕ್ ಅವರಿಗೆ ‘ಫಾಲ್’ ಆಧಾರದಲ್ಲಿ ಸೋತರು. ನವೀನ್ ಅವರೂ 130 ಕೆ.ಜಿ. ವಿಭಾಗದಲ್ಲಿ ಆಸ್ಟ್ರಿಯಾದ ಡೇನಿಯಲ್ ಗಸ್ಟಲ್ ಅವರೆದುರು ಪಾಯಿಂಟ್ಸ್ ಆಧಾರದಲ್ಲಿ ಸೋತು ಕ್ವಾಲಿಫಿಕೇಷನ್ ಸುತ್ತಿನಲ್ಲೇ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.