ನವದೆಹಲಿ: ಭಾರತ ಜೂನಿಯರ್ ಮಹಿಳಾ ತಂಡವು ಅರ್ಜೆಂಟೀನಾದ ರೊಸಾರಿಯೊದಲ್ಲಿ ನಡೆಯತ್ತಿರುವ ಚತುಷ್ಕೋನ ಜೂನಿಯರ್ ಮಹಿಳಾ ಹಾಕಿ ಟೂರ್ನಿಯಲ್ಲಿ ಉರುಗ್ವೆ ತಂಡದ ವಿರುದ್ಧ ಶೂಟೌಟ್‌ನಲ್ಲಿ ಗೆಲುವು ಸಾಧಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ನಿಗದಿತ ಅವಧಿಯ ಮುಕ್ತಾಯದ ವೇಳೆಗೆ ಉಭಯ ತಂಡಗಳು 2–2ರ ಸಮಬಲ ಸಾಧಿಸಿದವು. ಭಾರತ ತಂಡದ ಉಪನಾಯಕಿ ಹೀನಾ 10ನೇ ನಿಮಿಷದಲ್ಲಿ ಹಾಗೂ ಲಾಲರಿನ್‌ಪುಯಿ 24ನೇ ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು. ಬಳಿಕ ಇನಾ ಡಿ ಪೊಸಾಡ (54ನೇ ನಿಮಿಷ) ಹಾಗೂ ಮಿಲಾಗ್ರೊಸ್ ಸೀಗಲ್ (57ನೇ ನಿಮಿಷ) ದಾಖಲಿಸಿದ ಗೋಲುಗಳ ನೆರವಿನಿಂದ ಉರುಗ್ವೆ ತಂಡವು ದ್ವಿತೀಯಾರ್ಧದಲ್ಲಿ ಪುಟಿದೆದ್ದು, ಸಮಬಲ ಸಾಧಿಸಿತು.
ಶೂಟೌಟ್‌ನಲ್ಲಿ ಗೀತಾ, ಕನಿಕಾ ಹಾಗೂ ಲಾಲ್‌ತಂತಲುಆಂಗಿ ತಲಾ ಒಂದು ಗೋಲು ಗಳಿಸಿ 3–1ರಿಂದ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಉರುಗ್ವೆ ತಂಡ ಕೇವಲ ಒಂದು ಗೋಲು ಗಳಿಸಲು ಶಕ್ತವಾಯಿತು.
ಭಾರತ ತಂಡವು ಆತಿಥೇಯ ಅರ್ಜೆಂಟೀನಾ ತಂಡದ ಸವಾಲನ್ನು ಬುಧವಾರ ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.