ADVERTISEMENT

Asian Games | kabaddi: ಭಾರತ ಪುರುಷ-ಮಹಿಳಾ ತಂಡಗಳ ಮೇಲುಗೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2023, 10:34 IST
Last Updated 3 ಅಕ್ಟೋಬರ್ 2023, 10:34 IST
<div class="paragraphs"><p>ಭಾರತ ಮಹಿಳಾ ತಂಡ</p></div>

ಭಾರತ ಮಹಿಳಾ ತಂಡ

   

(ಪಿಟಿಐ ಚಿತ್ರ)

ಹಾಂಗ್‌ಝೌ: ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಕಬಡ್ಡಿ ವಿಭಾಗದಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಮೇಲುಗೈ ಸಾಧಿಸಿವೆ.

ADVERTISEMENT

ದಾಖಲೆಯ ಏಳು ಬಾರಿ ಚಾಂಪಿಯನ್ ಭಾರತದ ಪುರುಷ ತಂಡವು, 'ಎ' ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 55-18ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಮತ್ತೊಂದೆಡೆ ಭಾರತದ ಮಹಿಳೆಯರ ತಂಡ, 'ಎ' ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 56-23ರ ಅಂತರದಲ್ಲಿ ಜಯಭೇರಿ ಮೊಳಗಿಸಿದೆ.

ಕಳೆದ ಬಾರಿ ಬೆಳ್ಳಿ ಜಯಿಸಿದ್ದ ಭಾರತದ ಮಹಿಳಾ ತಂಡ, ಮೊದಲ ಪಂದ್ಯದಲ್ಲಿ ಚೀನಾ ತೈಪೆ ವಿರುದ್ಧ 34-34ರ ಅಂತರದ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.