ADVERTISEMENT

ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌: ಒಲಿಂಪಿಕ್‌ ಸ್ಥಾನ ಪಡೆಯುವತ್ತ ಚಿತ್ತ

ಪ್ರಿಕ್ವಾರ್ಟರ್‌ಫೈನಲ್‌ಗೆ ಭಾರತದ ಪುರುಷ, ಮಹಿಳಾ ತಂಡಗಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ಅತನು ದಾಸ್‌–ರಾಯಿಟರ್ಸ್‌ ಚಿತ್ರ
ಅತನು ದಾಸ್‌–ರಾಯಿಟರ್ಸ್‌ ಚಿತ್ರ   

ಡೆನ್‌ ಬಾಶ್‌ (ನೆದರ್ಲೆಂಡ್ಸ್): ಅಮೋಘ ಪ್ರದರ್ಶನ ತೋರಿದ ಭಾರತದ ಪುರುಷರ ರಿಕರ್ವ್‌ ವಿಭಾಗದ ಆರ್ಚರಿ ತಂಡ, ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾರ್ವೆ ತಂಡವನ್ನು ಮಣಿಸಿ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು. ಎದುರಾಳಿಯನ್ನು 5–1ರಿಂದ ಸೋಲಿಸಿದ ಭಾರತೀಯರು ಟೋಕಿಯೊ ಒಲಿಂಪಿಕ್ಸ್‌ಗೆ ಸ್ಥಾನ ಪಡೆಯಲು ಕೇವಲ ಒಂದು ಜಯ ದೀಪಿಕಾ ಕುಮಾರಿ– ಎಎಫ್‌ಪಿ ಚಿತ್ರ ಸಾಧಿಸಬೇಕಿದೆ.

ತರುಣ್‌ ದೀಪ್‌ ರಾಯ್‌, ಪ್ರವೀಣ್ ಜಾಧವ್‌ ಮತ್ತು ಅತನು ದಾಸ್‌ ಅವನ್ನೊಳಗೊಂಡ ತಂಡ ಬುಧವಾರ ಕೆನಡಾದ ಎರಿಕ್‌ ಪೀಟರ್ಸ್‌, ಕ್ರಿಸ್ಪಿನ್‌ ಡ್ಯುನಸ್‌ ಮತ್ತು ಬ್ರಿಯಾನ್ ಮ್ಯಾಕ್ಸ್‌ವೆಲ್‌ ಅವರ ತಂಡವನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ಮೂರು ಅಥ್ಲೀಟ್‌ ಕೋಟಾಗಳನ್ನು ಪಡೆಯಲಿದೆ.

ಭಾರತದ ಮಹಿಳಾ ತಂಡ ಕೂಡ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದು, 55 ದೇಶಗಳು ಸ್ಪರ್ಧಿಸಿರುವ ಟೂರ್ನಿಯಲ್ಲಿ ಆರನೇ ಸ್ಥಾನದೊಡನೆ ಅರ್ಹತೆ ಪಡೆದುಕೊಂಡಿದೆ. ನೇರವಾಗಿ ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿರುವ ತಂಡ 11ನೇ ಶ್ರೇಯಾಂಕದ ಬೆಲಾರಸ್‌ ತಂಡವನ್ನು ಬುಧವಾರ ಎದುರಿಸಲಿದೆ.

ADVERTISEMENT

ಭಾರತದ ಪರವಾಗಿ ಸ್ಪರ್ಧಿಸಿದ್ದ ಲಾಯಿಶ್ರಾಮ್‌ ಬೊಂಬಯ್ಲಾದೇವಿ ಅರ್ಹತಾ ಸುತ್ತಿನಲ್ಲಿ 664 ಪಾಯಿಂಟ್‌ಗೆಗುರಿಯಿಟ್ಟು 15ನೇ ಸ್ಥಾನ ಪಡೆದರು. ದೀಪಿಕಾ 22ನೇ ಸ್ಥಾನ ಹಾಗೂ ಕೋಮಲಿಕಾ ಬಾರಿ 40ನೇ ಸ್ಥಾನ ಗಳಿಸಿದರು. ಒಟ್ಟು 152 ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿದ್ದರು.

ಭಾರತ ತಂಡಕ್ಕೆ ಅಲ್ಪ ನಿರಾಸೆಯೂ ಕಾಡಿತು. ರಿಕರ್ವ್‌ ಮಿಕ್ಸೆಡ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ತರುಣದೀಪ್‌ ರಾಯ್‌ ಹಾಗೂ ಬೊಂಬಯ್ಲಾ ದೇವಿ ಜೋಡಿ, ಪೋಲೆಂಡ್‌ ಎದುರಾಳಿಯ ವಿರುದ್ಧ 4–5 (17/19)ರಿಂದ ಸೋಲನ್ನಪ್ಪಿತು.

ದೀಪಿಕಾ ಕುಮಾರಿ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.