ADVERTISEMENT

ಜಪಾನ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್

ಪಿಟಿಐ
Published 1 ಸೆಪ್ಟೆಂಬರ್ 2022, 6:26 IST
Last Updated 1 ಸೆಪ್ಟೆಂಬರ್ 2022, 6:26 IST
ಎಚ್‌.ಎಸ್‌. ಪ್ರಣಯ್‌ (ಪಿಟಿಐ ಚಿತ್ರ)
ಎಚ್‌.ಎಸ್‌. ಪ್ರಣಯ್‌ (ಪಿಟಿಐ ಚಿತ್ರ)   

ಟೋಕಿಯೊ: ಭಾರತದ ಷಟ್ಲರ್‌ ಎಚ್‌.ಎಸ್‌. ಪ್ರಣಯ್‌ ಅವರು ಜಪಾನ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಜಯದ ಓಟ ಮುಂದುವರಿಸಿದ್ದು, ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಕಳೆದವಾರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ ವಿಶ್ವದ ಮಾಜಿ ನಂ.8 ರ‍್ಯಾಂಕ್‌ ಆಟಗಾರ ಪ್ರಣಯ್‌, ಮಾಜಿ ವಿಶ್ವ ಚಾಂಪಿಯನ್‌, ಸಿಂಗಪುರದ ಲೊಹ್‌ ಕಿಯಾನ್‌ ಯೆವ್‌ ಅವರನ್ನು 22–20, 21–19 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಈ ಸಾಧನೆ ಮಾಡಿದರು.

ಸದ್ಯ ಎಂಟನೇ ರ‍್ಯಾಂಕ್‌ನಲ್ಲಿರುವಸಿಂಗಪುರ ಆಟಗಾರನ ವಿರುದ್ಧ ನಾಲ್ಕು ಬಾರಿ ಮುಖಾಮುಖಿಯಾಗಿರುವ ಪ್ರಣಯ್‌ಗೆ ದಕ್ಕಿದ ಮೂರನೇ ಜಯ ಇದಾಗಿದೆ. ಈ ಪಂದ್ಯವು 44 ನಿಮಿಷ ನಡೆಯಿತು.

ADVERTISEMENT

ಭಾರತದ 30 ವರ್ಷದ ಆಟಗಾರ ಕ್ವಾರ್ಟರ್‌ಫೈನಲ್‌ನಲ್ಲಿ ತೈಪೆಯ ಚೌ ಟಿಯೆನ್‌ ಚೆನ್‌ ವಿರುದ್ಧ ಸೆಣಸಲಿದ್ದಾರೆ. ಚೆನ್‌ ವಿರುದ್ಧ ಆಡಿರುವ ಕಳೆದ ಎರಡೂ ಪಂದ್ಯಗಳಲ್ಲಿ ಪ್ರಣಯ್‌ ಮುಗ್ಗರಿಸಿದ್ದಾರೆ. ಹೀಗಾಗಿ ಈ ಪಂದ್ಯ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.