ADVERTISEMENT

ಒಲಿಂಪಿಕ್ ಅರ್ಹತಾ ಹಾಕಿ ಪಂದ್ಯಗಳು ಇಂದಿನಿಂದ

ಪಿಟಿಐ
Published 31 ಅಕ್ಟೋಬರ್ 2019, 19:10 IST
Last Updated 31 ಅಕ್ಟೋಬರ್ 2019, 19:10 IST

ಭುವನೇಶ್ವರ : ಭಾರತ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳು ಶುಕ್ರವಾರ ಮತ್ತು ಶನಿವಾರ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕ್ರಮವಾಗಿ ರಷ್ಯಾ ಮತ್ತು ಅಮೆರಿಕವನ್ನು ಸೆಣಸಲಿವೆ.

ಎರಡೂ ಪಂದ್ಯಗಳಲ್ಲಿ ಮೇಲುಗೈ ಸಾಧಿಸುವ ತಂಡಗಳು ಒಲಿಂಪಿಕ್ಸ್‌ ಟಿಕೆಟ್ ‌ಗಿಟ್ಟಿಸಿಕೊಳ್ಳಲಿವೆ. ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ರಷ್ಯಾವನ್ನು ಮಣಿಸುವುದು 5ನೇ ಸ್ಥಾನದಲ್ಲಿರುವ ಭಾರತಕ್ಕೆ ಕಷ್ಟಕರವಾಗದು. ಆದರೂ ಎಚ್ಚರ ತಪ್ಪಿದರೆ ಆತಿಥೇಯ ಒಲಿಂಪಿಕ್ಸ್ ಕನಸು ಭಗ್ನವಾಗಲಿದೆ.

ಮಹಿಳಾ ತಂಡ ಇಲ್ಲಿ ಅಗ್ನಿ ಪರೀಕ್ಷೆ ಎದುರಿಸಲಿದೆ. ಬಲಿಷ್ಠ ಅಮೆರಿಕ ತಂಡವನ್ನು ಎದುರಿಸುವುದರೊಂದಿಗೆ ತವರಿನ ಪ್ರೇಕ್ಷಕರ ಮುಂದೆ ಸಾಮರ್ಥ್ಯ ಪ್ರದರ್ಶಿಸುವ ಸವಾಲು ಕೂಡ ತಂಡಕ್ಕೆ ಇದೆ.

ADVERTISEMENT

ಆರಂಭ: ಸಂಜೆ 6.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.