ADVERTISEMENT

ಪ್ಯಾರಿಸ್ ತಲುಪಿದ ಭಾರತ ಮಹಿಳಾ ಆರ್ಚರಿ ತಂಡ

ಒಲಿಂಪಿಕ್ಸ್ ಅರ್ಹತಾ ಟೂರ್ನಿ: ಅಗ್ರ ಮೂರರಲ್ಲಿ ಸ್ಥಾನ ಪಡೆಯು ಗುರಿ

ಪಿಟಿಐ
Published 7 ಜೂನ್ 2021, 14:04 IST
Last Updated 7 ಜೂನ್ 2021, 14:04 IST
ದೀಪಿಕಾ ಕುಮಾರಿ
ದೀಪಿಕಾ ಕುಮಾರಿ   

ಪ್ಯಾರಿಸ್‌: ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸುವ ಕೊನೆಯ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಮಹಿಳಾ ಆರ್ಚರಿ ತಂಡವು ಸೋಮವಾರ ಇಲ್ಲಿಗೆ ತಲುಪಿದೆ. ಇದೇ 20ರಿಂದ ಈ ಟೂರ್ನಿ ನಡೆಯಲಿದೆ.

ಟೋಕಿಯೊದಲ್ಲಿ ಜುಲೈ 23ರಿಂದ ನಿಗದಿಯಾಗಿರುವ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ತಂಡವು ಈ ಟೂರ್ನಿಯಲ್ಲಿ ಅಗ್ರ ಮೂರರೊಳಗಿನ ಸ್ಥಾನ ಗಳಿಸಬೇಕಿದೆ.

‘ಭಾರತ ಮಹಿಳಾ ತಂಡವು ಪ್ಯಾರಿಸ್‌ನಲ್ಲಿ 10 ದಿನಗಳ ಕ್ವಾರಂಟೈನ್‌ ಪೂರ್ಣಗೊಳಿಸಲಿದೆ. ಪುರುಷರ ಮತ್ತು ಕಾಂಪೌಂಡ್ ತಂಡಗಳು ಮಂಗಳವಾರ ತೆರಳಲಿವೆ‘ ಎಂದು ಭಾರತ ಆರ್ಚರಿ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಗುಂಜನ್ ಎಬ್ರೊಲ್‌ ತಿಳಿಸಿದ್ದಾರೆ.

ADVERTISEMENT

ಪುರುಷರ ತಂಡವು 2019ರ ವಿಶ್ವ ಚಾಂಪಿಯನ್‌ಷಿಪ್ ಮೂಲಕ ಈಗಾಗಲೇ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿದೆ. ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಕೂಡ ಅರ್ಹತೆ ಗಳಿಸಿದ್ದಾರೆ.

ಅರ್ಹತಾ ಟೂರ್ನಿಯ ಬಳಿಕ ವಿಶ್ವಕಪ್ ಮೂರನೇ ಹಂತದ ಟೂರ್ನಿಯಲ್ಲೂ ಪುರುಷ ಮತ್ತು ಮಹಿಳಾ ತಂಡಗಳು ಸ್ಪರ್ಧಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.