ADVERTISEMENT

Tokyo Olympics| ಭರ್ಜರಿ ಜಯ ದಾಖಲಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಪೋಗಟ್‌ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2021, 3:05 IST
Last Updated 5 ಆಗಸ್ಟ್ 2021, 3:05 IST
ವಿನೇಶಾ ಪೋಗಟ್ (ಪಿಟಿಐ)
ವಿನೇಶಾ ಪೋಗಟ್ (ಪಿಟಿಐ)   

ಟೋಕಿಯೊ: ಭಾರತದ ಭರವಸೆಯ ಕುಸ್ತಿಪಟು ವಿನೇಶಾ ಪೋಗಟ್ ಗುರುವಾರ 53 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಪ್ಯಾಟಿನ್ಸನ್‌ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

7-1ರ ಅಂತರದಲ್ಲಿ ಪೋಗಟ್‌ ಅವರು ಸೋಫಿಯಾ ಪ್ಯಾಟಿನ್ಸನ್‌ ವಿರುದ್ಧ ಜಯ ಸಾಧಿಸಿದರು.

"ಈ ಪಂದ್ಯದಲ್ಲಿ ವಿನೇಶಾ ಗೆದ್ದಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಅವಳು ಚೆನ್ನಾಗಿ ಆಡಿದ್ದಳು. ನನಗೆ ಸಂತೋಷವಾಗಿದೆ’ ಎಂದು ಹರಿಯಾಣದ ಬಾಲಾಲಿಯಲ್ಲಿ ವಿನೇಶಾ ಫೋಗಟ್ ಅವರ ತಾಯಿ ಪ್ರೇಮಲತಾ ಹೇಳಿದ್ದಾರೆ.

ADVERTISEMENT

ವಿನೇಶಾಗೆ ಇದು ಎರಡನೇ ಒಲಿಂಪಿಕ್ಸ್‌. ಕಳೆದ ಬಾರಿ ರಿಯೊದಲ್ಲೂ ಅವರು ಪಾಲ್ಗೊಂಡಿದ್ದರು. ಸೋಫಿಯಾ ಈಗಾಗಲೇ ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.