ಓಟ
ಗುವಾಂಗ್ಜು: ಭಾರತದ ಅಥ್ಲೀಟ್‌ಗಳು ವಿಶ್ವ ಅಥ್ಲೆಟಿಕ್ಸ್ ರಿಲೆ ಚಾಂಪಿಯನ್‌ಷಿಪ್‌ನಲ್ಲಿ ಬರಿಗೈಯಲ್ಲಿ ಹೊರಬಿದ್ದರು.
4X400 ಮೀ ರಿಲೆಯ ಪುರುಷ ಮತ್ತು ಮಿಶ್ರ ವಿಭಾಗಗಳ ರಿಲೆಯಲ್ಲಿ ಭಾರತ ತಂಡಗಳು ವಿಶ್ವ ಚಾಂಪಿಯನ್‌ಷಿಪ್ ಪ್ರವೇಶದ ಅರ್ಹತಾ ಮಟ್ಟವನ್ನು ತಲುಪುವಲ್ಲಿ ವಿಫಲವಾದವು.
ಮಿಶ್ರ ವಿಭಾಗದ ಎರಡನೇ ಹೀಟ್ಸ್‌ನಲ್ಲಿ ಸಂತೋಷ್ ಕುಮಾರ್ ತಮಿಳರಸನ್, ರೂಪಲ್ ಚೌಧರಿ, ತೆನ್ನರಸು ಕಾವಾಲ್‌ವಿಝಿ ವಿಶಾಲ್ ಮತ್ತು ಶುಭಾ ವೆಂಕಟೇಶನ್ ಅವರಿದ್ದ ತಂಡವು 3 ನಿಮಿಷ, 14.81ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ನಾಲ್ಕನೇ ಸ್ಥಾನ ಪಡೆಯಿತು.
ಎರಡು ಹೀಟ್ಸ್‌ನಲ್ಲಿ ಕ್ರಮವಾಗಿ ಅಗ್ರ ಮೂರು ತಂಡಗಳು ವಿಶ್ವ ಅಥ್ಲೆಟಿಕ್ಸ್‌ಗೆ ಅರ್ಹತೆ ಗಿಟ್ಟಿಸುತ್ತವೆ. ಸೆಪ್ಟೆಂಬರ್ 13 ರಿಂದ 21ರವರೆಗೆ ಟೋಕಿಯೊದಲ್ಲಿ ವಿಶ್ವ ಅಥ್ಲೆಟಿಕ್ಸ್ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಜಯಕುಮಾರ್, ಧರಮ್‌ವೀರ್ ಚೌಧರಿ, ತೆಕ್ಕಿನಲಿಲ್ ಸಾಜಿ ಮನು ಮತ್ತು ರಿನ್ಸ್ ಜೋಸೆಫ್ ಅವರಿದ್ದ ಭಾರತ ರಿಲೆ ತಂಡವು 3 ನಿಮಿಷ, 4.49 ಸೆಕೆಂಡುಗಳಲ್ಲಿ ಗುರಿ ತಲುಪಿತು.
ಪುರುಷರ ಮತ್ತು ಮಹಿಳೆಯರ 4X100 ಮೀ ಮತ್ತು 4X400 ಮೀ ವಿಭಾಗಗಳಲ್ಲಿ ಕ್ರಮವಾಗಿ 14 ತಂಡಗಳು ವಿಶ್ವ ಕೂಟಕ್ಕೆ ಅರ್ಹತೆ ಪಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.