ADVERTISEMENT

ಬೀಚ್‌ ವಿಭಾಗದಲ್ಲಿ ರಾಜ್ಯ ತಂಡಕ್ಕೆ ಅಗ್ರಸ್ಥಾನ

ದಕ್ಷಿಣ ವಲಯ ಪೆಂಕಾಕ್‌ ಸಿಲಟ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 20:14 IST
Last Updated 10 ನವೆಂಬರ್ 2019, 20:14 IST

ಬೆಂಗಳೂರು: ಕರ್ನಾಟಕ ತಂಡವು ದಕ್ಷಿಣ ವಲಯ ಪೆಂಕಾಕ್ ಸಿಲಟ್‌ನಬೀಚ್‌ ವಿಭಾಗದ ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸಿತು. ಆಂಧ್ರಪ್ರದೇಶದ ಓಂಗೋಲುವಿನ ಕೊತ್ತಪಟ್ಟಣಂ ಬೀಚ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ ಶನಿವಾರ ಮುಕ್ತಾಯವಾಯಿತು.

ಆಂಧ್ರಪ್ರದೇಶದ 110, ಕರ್ನಾಟಕದ 41, ಕೇರಳದ 21, ತಮಿಳುನಾಡಿನ 20, ತೆಲಂಗಾಣದ 23 ಮಂದಿ ಸೇರಿ ಒಟ್ಟು 220 ಆಟಗಾರರು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು.

ಆತಿಥೇಯ ಆಂಧ್ರಪ್ರದೇಶ ಟೂರ್ನಿಯ ಚಾಂಪಿಯನ್‌ ಪಟ್ಟ ಧರಿಸಿತು. ಕರ್ನಾಟಕ ತಂಡವು ಸೇನಿ ಹಾಗೂ ಬೀಚ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಿತು. ಕೇರಳ ರನ್ನರ್‌ ಅಪ್‌ ಸ್ಥಾನ ಗಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.