ADVERTISEMENT

ಸ್ಪೀಡ್ ಚೆಸ್ ಗ್ರ್ಯಾಂಡ್‌ ಪ್ರೀಗೆ ಇಂಟರ್‌ನ್ಯಾಷನಲ್ ಮಾಸ್ಟರ್ ವೈಶಾಲಿ ಆಯ್ಕೆ

ಪಿಟಿಐ
Published 24 ಜೂನ್ 2020, 12:14 IST
Last Updated 24 ಜೂನ್ 2020, 12:14 IST
ಚೆಸ್‌
ಚೆಸ್‌   

ಚೆನ್ನೈ: ಭಾರತದ ಚೆಸ್ ಪಟು, ಇಂಟರ್‌ನ್ಯಾಷನಲ್ ಮಾಸ್ಟರ್ ಆರ್.ವೈಶಾಲಿ ಅವರು ಫಿಡೆ ಚೆಸ್ ಡಾಟ್ ಕಾಮ್ ಆಯೋಜಿಸುವ ಮಹಿಳೆಯರ ಸ್ಪೀಡ್ ಚೆಸ್ ಚಾಂಪಿಯನ್‌ಷಿಪ್‌ ಗ್ರ್ಯಾಂಡ್‌ ಪ್ರಿಯಲ್ಲಿಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಅವರು ಈ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ ಭಾರತದ ಮೂರನೇ ಆಟಗಾರ್ತಿ. ಕೊನೆರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಇನ್ನಿಬ್ಬರು.

ಯುವ ಚೆಸ್ ಪ್ರತಿಭೆ ಆರ್‌.ಪ್ರಜ್ಞಾನಂದ ಅವರ ಸಹೋದರಿಯಾಗಿರುವ ವೈಶಾಲಿ ಚೀನಾದ ಹೌ ಯಿಫಾನ್ ಮತ್ತು ವಿಶ್ವ ಚಾಂಪಿಯನ್ ಜೂ ವೆಂಜು ಮುಂತಾದ ಪ್ರಮುಖ ಆಟಗಾರ್ತಿಯರು ಇರುವ ಕಣದಲ್ಲಿ ಸ್ಪರ್ಧಿಸಬೇಕಾಗಿದೆ. ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕೊನೆರು ಹಂಪಿ ಅವರಿಗೆ ನೇರ ಪ್ರವೇಶ ಲಭಿಸಿದ್ದು ಹರಿಕಾ ಮತ್ತು ವೈಶಾಲಿ ಪ್ಲೇಆಫ್ ಮೂಲಕ ಅರ್ಹತೆ ಗಳಿಸಿದ್ದಾರೆ.

2017ರ ಏಷ್ಯನ್ ಬ್ಲಿಡ್ಜ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿರುವ ವೈಶಾಲಿ ಮೊದಲ ಹಣಾಹಣಿಯಲ್ಲಿ ಬಲ್ಗೇರಿಯಾದ ಅಂಟೊನೆಟಾ ಸ್ಟೆಫನೊವಾ ಅವರನ್ನು ಎದುರಿಸಲಿದ್ದು ಕೊನೆರು ಹಂಪಿಗೆ ವಿಯಟ್ನಾಂನ ಲೀ ಥಾವೊ ಗುಯೆನ್ ಫಾಮ್ ಎದುರಾಳಿ.

ADVERTISEMENT

‘ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿರುವುದು ಖುಷಿ ತಂದಿದೆ. ಅರ್ಹತಾ ಸುತ್ತಿನ ಎಲ್ಲ ಸ್ಪರ್ಧೆಯಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದೇನೆ‌. ಅಲಿನಾ ಕಶ್ಲಿಂಗ್ಸಾಯ ಎದುರಿನ ಸ್ಪರ್ಧೆಯ ಗೆಲುವು ಭರವಸೆ ತುಂಬಿದೆ’ ಎಂದು ವೈಶಾಲಿ ಹೇಳಿದರು.

‘ಬ್ಲಿಡ್ಜ್‌ನಲ್ಲಿ ವೈಶಾಲಿ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. 2017ರಲ್ಲಿ ಏಷ್ಯನ್ ಚಾಂಪಿಯನ್‌ ಆಗುವ ಮೂಲಕ ಅವರು ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ’ ಎಂದು ಕೋಚ್ ಆರ್‌.ಬಿ.ರಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.