ADVERTISEMENT

ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಮಹಾಬಲೇಶ್ವರಗೆ 3 ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 23:30 IST
Last Updated 10 ಏಪ್ರಿಲ್ 2025, 23:30 IST
ಮೂರು ಚಿನ್ನದ ಪದಕಗಳೊಂದಿಗೆ ಮಹಾಬಲೇಶ್ವರ ಭಟ್ಟ
ಮೂರು ಚಿನ್ನದ ಪದಕಗಳೊಂದಿಗೆ ಮಹಾಬಲೇಶ್ವರ ಭಟ್ಟ   

ಬೆಂಗಳೂರು: ಕರ್ನಾಟಕದ ಮಹಾಬಲೇಶ್ವರ ಭಟ್ಟ ಅವರು ನೇಪಾಳದ ಪೋಖರದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.

70 ವರ್ಷ ಮೇಲ್ಪಟ್ಟವರ ವಿಭಾಗದ 60 ಮೀ. (7.05 ಸೆಕೆಂಡ್‌), 100 ಮೀ. (15.04ಸೆ) ಮತ್ತು 200 ಮೀ. ಓಟದಲ್ಲಿ (33.42ಸೆ) ಮಹಾಬಲೇಶ್ವರ ಅವರು ಚಾಂಪಿಯನ್‌ ಆದರು.

ಕರ್ನಾಟಕದ ನಾಲ್ವರು ಮಹಿಳಾ ಈಜುಪಟುಗಳು ಕೂಟದಲ್ಲಿ ಸ್ಪರ್ಧಿಸಿದ್ದರು. 40 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ವಿಂಧ್ಯಾ ಪ್ರಭು ಎರಡು ಚಿನ್ನ, ಸಂಧ್ಯಾ ಪ್ರಭು ಒಂದು ಚಿನ್ನ ಮತ್ತು ಒಂದು ಬೆಳ್ಳಿ ಮತ್ತು ಸುನೀತಾ ಒಂದು ಚಿನ್ನ ಗೆದ್ದಿದ್ದಾರೆ. 65 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕನಕವಲ್ಲಿ ಒಂದು ಚಿನ್ನ ಜಯಿಸಿದ್ದಾರೆ. ಸಂಯುಕ್ತಾ ಭಾರತೀಯ ಖೇಲ್ ಫೌಂಡೇಷನ್‌ (ಎಸ್‌ಬಿಕೆಎಫ್‌) ಆತಿಥ್ಯದಲ್ಲಿ ಏ.3ರಿಂದ 7ರವರೆಗೆ ಕೂಟ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.