ADVERTISEMENT

ಏಷ್ಯನ್‌ ಗೇಮ್ಸ್‌: ಮಾಧ್ಯಮ ಸಂಯೋಜಕರಾಗಿ ರಾಜಾರಾಮನ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 13:02 IST
Last Updated 11 ಆಗಸ್ಟ್ 2023, 13:02 IST
ಜಿ.ರಾಜಾರಾಮನ್
ಜಿ.ರಾಜಾರಾಮನ್   

ನವದೆಹಲಿ: ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡದ ಮಾಧ್ಯಮ ಸಂಯೋಜಕರಾಗಿ ಕ್ರೀಡಾ ಪತ್ರಕರ್ತ ಜಿ.ರಾಜಾರಾಮನ್ ಅವರನ್ನು ಭಾರತ ಒಲಿಂಪಿಕ್ಸ್‌ ಸಂಸ್ಥೆ ಶುಕ್ರವಾರ ನೇಮಕ ಮಾಡಿದೆ.

ಸೆ. 23ರಿಂದ ಅಕ್ಟೋಬರ್‌ 8ರವರೆಗೆ ಚೀನಾದ ಹಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್‌ ನಡೆಯಲಿದೆ. ಅಲ್ಲಿಗೆ ಭಾರತವು ಅತಿದೊಡ್ಡ ತಂಡವನ್ನು ಕಳುಹಿಸಲಿದೆ.

‘ರಾಜಾರಾಮನ್‌ ಅವರ ಅಗಾಧ ಅನುಭವವು ಏಷ್ಯನ್‌ ಗೇಮ್ಸ್‌ ಸಂದರ್ಭದಲ್ಲಿ ಭಾರತ ತಂಡ ಮತ್ತು ಮಾಧ್ಯಮಗಳ ನಡುವೆ ಉತ್ತಮ ಸಂವಹನ ಸಾಧ್ಯವಾಗಲಿದೆ. ಅಲ್ಲದೆ, ನಮ್ಮ ಕ್ರೀಡಾಪಟುಗಳ ಪ್ರಾತಿನಿಧ್ಯವನ್ನು ಹೆಚ್ಚಿಸುವ ವಿಶ್ವಾಸ ಹೊಂದಿದ್ದೇವೆ’ ಎಂದು ಭಾರತ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಈ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇವೆ ಮತ್ತು ಕ್ರೀಡಾ ಪತ್ರಿಕೋದ್ಯಮಕ್ಕೆ ಅವರ ಬದ್ಧತೆಯನ್ನು ಪ್ರಶಂಸಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.