ADVERTISEMENT

ಸಿಜಿಎಫ್‌ ವಿರುದ್ಧ ಭಾರತ ಪ್ರತಿಭಟನೆ

2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸೇರಿಸದೇ ಇರುವುದಕ್ಕೆ ವಿರೋಧ

ಪಿಟಿಐ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST
ಶೂಟಿಂಗ್ –ಪಿಟಿಐ ಚಿತ್ರ
ಶೂಟಿಂಗ್ –ಪಿಟಿಐ ಚಿತ್ರ   

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಶೂಟಿಂಗ್ ಸೇರಿಸದೇ ಇರುವುದನ್ನು ಪ್ರತಿಭಟಿಸಲು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕೂಟದ ಫೆಡರೇಷನ್‌ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದುಐಒಎ ತಿಳಿಸಿದೆ.

ಈ ಕುರಿತು ಫೆಡರೇಷನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಗ್ರೀವಂಬರ್ಗ್‌ ಅವರಿಗೆ ಪತ್ರ ಬರೆದಿರುವ ಐಒಎ, ಪ್ರಾದೇಶಿಕ ಮಟ್ಟದ ಚುನಾವಣೆಯಿಂದ ರಾಜೀವ್‌ ಮೆಹ್ತಾ ಅವರ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದೆ. ಮೆಹ್ತಾ ಅವರು ಐಒಎ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕ್ರೀಡಾ ಸಮಿತಿ ಸದಸ್ಯ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನೂ ವಾಪಸ್ ಪಡೆದುಕೊಂಡಿದೆ. ನಾಮದೇವ ಶಿರ್ಗಾಂವ್ಕರ್ ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT