ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಭಾರತೀಯ ತಂಡಕ್ಕೆ ಅದಾನಿ ಗ್ರೂಪ್ ಪ್ರಾಯೋಜಕತ್ವ

ಪಿಟಿಐ
Published 23 ಜುಲೈ 2021, 16:14 IST
Last Updated 23 ಜುಲೈ 2021, 16:14 IST
ರಾಜೀವ್ ಮೆಹ್ತಾ ಟ್ವೀಟ್‌ನ ಸ್ಕ್ರೀನ್ ಗ್ರ್ಯಾಬ್
ರಾಜೀವ್ ಮೆಹ್ತಾ ಟ್ವೀಟ್‌ನ ಸ್ಕ್ರೀನ್ ಗ್ರ್ಯಾಬ್   

ಟೋಕಿಯೊ: ಅದಾನಿ ಗ್ರೂಪ್‌, ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತೀಯ ತುಕಡಿಯ ಪ್ರಾಯೋಜಕತ್ವ ವಹಿಸಿಕೊಂಡಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಹೇಳಿದೆ.

ಟೋಕಿಯೊದಲ್ಲಿರುವ ಐಒಎ ಪ್ರಧಾನ ಕಾರ್ಯದರ್ಶಿ, ರಾಜೀವ್ ಮೆಹ್ತಾ ಅವರು ಈ ಸುದ್ದಿಯನ್ನು ಪ್ರಕಟಿಸಿದ್ದಾರೆ.

‘ಒಲಿಂಪಿಕ್ಸ್‌ಗಾಗಿ ಅದಾನಿ ಗ್ರೂಪ್ ಐಒಎಗೆ ಮತ್ತೊಂದು ಪ್ರಾಯೋಜಕತ್ವ ವಹಿಸಿಕೊಂಡಿರುವುದನ್ನು ನಿಮಗೆ ತಿಳಿಸಲು ನನಗೆ ಸಂತಸವಾಗುತ್ತಿದೆ.’ಎಂದು ಮೆಹ್ತಾ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಅದಾನಿ ಗ್ರೂಪ್ ನಮಗೆ ಪ್ರಾಯೋಜಕತ್ವ ನೀಡುವ ಬಗ್ಗೆ ಖಚಿತಪಡಿಸಿದೆ ಮತ್ತು ಭವಿಷ್ಯಕ್ಕೂ ಬೆಂಬಲ ಘೋಷಿಸಿದೆ.’ ಎಂದು ಅವರು ಹೇಳಿದರು.

ಈ ಹಿಂದೆ ಐಒಎ, ಡೈರಿ ದೈತ್ಯ ಅಮುಲ್, ಮೊಬೈಲ್ ಗೇಮಿಂಗ್ ಪ್ಲಾಟ್‌ಫಾರ್ಮ್ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಶನ್, ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳೊಂದಿಗೆ ಪ್ರಾಯೋಜಕತ್ವದ ಒಪ್ಪಂದಗಳನ್ನು ಮಾಡಿಕೊಂಡಿತ್ತು.

ಟೋಕಿಯೊ ಒಲಿಂಪಿಕ್ಸ್‌ಗೆ ಭಾರತೀಯ ತಂಡದ ಅಧಿಕೃತ ಕಿಟ್ ಪ್ರಾಯೋಜಕರಾಗಿ ಚೀನಾದ ಕ್ರೀಡಾ ಉಡುಪು ಬ್ರಾಂಡ್ ಲಿ ನಿಂಗ್ ಅವರನ್ನು ಕೈಬಿಟ್ಟ ನಂತರ ದೇಶದ ಕ್ರೀಡಾಪಟುಗಳು ಅನ್‌ಬ್ರಾಂಡ್ ಉಡುಪುಗಳನ್ನು ಧರಿಸುತ್ತಾರೆ ಎಂದು ಐಒಎ ತಿಳಿಸಿತ್ತು.

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮಾತನಾಡಿ, ಒಲಿಂಪಿಕ್ ಕನಸುಗಳ ಅನ್ವೇಷಣೆಯಲ್ಲಿರುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸುತ್ತಿರುವ ಬಗ್ಗೆ ನಮ್ಮ ಸಂಸ್ಥೆಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.