ADVERTISEMENT

ಭಾರತಕ್ಕೆ ಆತಿಥ್ಯ ಇಲ್ಲ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:00 IST
Last Updated 20 ಫೆಬ್ರುವರಿ 2019, 20:00 IST

ನವದೆಹಲಿ: ಮುಂಬರುವ ದಿನಗಳಲ್ಲಿ ಭಾರತಕ್ಕೆ ಅಂತರರಾಷ್ಟ್ರೀಯ ಕೂಟಗಳ ಆತಿಥ್ಯ ನೀಡಬೇಕೊ ಬೇಡವೊ, ಒಂದೊಮ್ಮೆ ನೀಡದಿದ್ದರೆ ಆಗಬಹುದಾದ ಪರಿಣಾಮಗಳೇನು ಎಂಬುದರ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ತಿಳಿಸಿದೆ.

ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾಗವಹಿಸಬೇಕಿದ್ದ ಮೂವರು ಸದಸ್ಯರ ಪಾಕಿಸ್ತಾನ ತಂಡಕ್ಕೆ ಕೇಂದ್ರ ಸರ್ಕಾರ ವೀಸಾ ನಿರಾಕರಿಸಿರುವ ಬೆನ್ನಲ್ಲೇ ಐಎಸ್‌ಎಫ್‌ಎಫ್‌ಎ ಈ ಹೇಳಿಕೆ ನೀಡಿದೆ.

‘ಪುಲ್ವಾಮಾ ಭಯೋತ್ಪಾದನಾ ದಾಳಿಯ ಕಾರಣ ಪಾಕಿಸ್ತಾನದ ಶೂಟರ್‌ಗಳಿಗೆ ವೀಸಾ ನಿರಾಕರಿಸಲಾಗಿದೆ. ಪಾಕ್‌ಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಐಎಸ್‌ಎಸ್‌ಎಫ್‌ ಪ್ರಕಟಣೆಯಲ್ಲಿ ಹೇಳಲಾಗಿದೆ.

ADVERTISEMENT

ಪಾಕಿಸ್ತಾನದ ಶೂಟರ್‌ಗಳಿಗೆ ವೀಸಾ ನೀಡುವಂತೆ ಐಎಸ್‌ಎಸ್‌ಎಫ್‌, ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಇದಕ್ಕೆ ಸಚಿವಾಲಯ ಸಕಾರತ್ಮಕವಾಗಿ ಸ್ಪಂದಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.