ADVERTISEMENT

ಶೂಟಿಂಗ್ ವಿಶ್ವಕಪ್‌ ಇಂದಿನಿಂದ

ಪಿಟಿಐ
Published 22 ಫೆಬ್ರುವರಿ 2019, 19:33 IST
Last Updated 22 ಫೆಬ್ರುವರಿ 2019, 19:33 IST
ಅಪೂರ್ವಿ
ಅಪೂರ್ವಿ   

ನವದೆಹಲಿ: ಅನುಭವಿ ಶೂಟರ್‌ಗಳಾದ ಅಂಜುಮ್‌ ಮೌದ್ಗಿಲ್, ಅಪೂರ್ವಿ ಚಂಡೇಲ ಮತ್ತು ಇಳವೆನ್ನಿಲಾ ವಾಳವರಿವನ್‌ ಇಲ್ಲಿ ಶನಿವಾರ ಆರಂಭವಾಗಲಿರುವ ಶೂಟಿಂಗ್ ವಿಶ್ವಕಪ್‌ನ ಮೊದಲ ದಿನ ಕಣಕ್ಕೆ ಇಳಿಯುವರು.

ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆಯಲಿರುವ ಸ್ಪರ್ಧೆಗಳ ಅಧಿಕೃತ ಉದ್ಘಾಟನೆ ಎರಡು ದಿನಗಳ ಹಿಂದೆ ನಡೆದಿತ್ತು. ಪಾಕಿಸ್ತಾನದ ಇಬ್ಬರು ಶೂಟರ್‌ಗಳಿಗೆ ವೀಸಾ ನಿರಾಕರಿಸಿದ್ದರಿಂದ ಈ ವಿಶ್ವಕಪ್‌ನ 25 ಮೀಟರ್ ರ‍್ಯಾಪಿಡ್‌ ಫೈರ್ ಪಿಸ್ತೂಲು ವಿಭಾಗದ ಪದಕಗಳನ್ನು ಮುಂದಿನ ಒಲಿಂಪಿಕ್ಸ್‌ಗೆ ಪರಿಗಣಿಸದೇ ಇರಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧರಿಸಿದೆ.

ಅಂಜುಮ್‌, ಅಪೂರ್ವಿ ಮತ್ತು ಇಳವೆನ್ನಿಲಾ ಅವರು ಮಹಿಳೆಯರ 10 ಮೀ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 60 ದೇಶಗಳ 500 ಶೂಟರ್‌ಗಳು ಐದು ದಿನಗಳ ವಿಶ್ವಕಪ್‌ ನಲ್ಲಿ ಪದಕಗಳ ಬೇಟೆಯಾಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.