ADVERTISEMENT

Tokyo Olympics: ಜಪಾನ್‌ ಹುಡುಗಿಯರ ಮೋಡಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 18:16 IST
Last Updated 4 ಆಗಸ್ಟ್ 2021, 18:16 IST
ಮಹಿಳೆಯರ ಸ್ಕೇಟ್‌ಬೋರ್ಡ್‌ನ ಪಾರ್ಕ್‌ ಸ್ಪರ್ಧೆಯಲ್ಲಿ (ಎಡದಿಂದ) ಬೆಳ್ಳಿ ಗೆದ್ದ ಕೊಕೊನಾ ಹಿರಾಕಿ, ಚಿನ್ನಕ್ಕೆ ಮುತ್ತಿಟ್ಟ ಸಕುರಾ ಯೊಸೊಜುಮಿ ಮತ್ತು ಕಂಚು ಗಳಿಸಿದ ಸ್ಕೈ ಬ್ರೌನ್‌ ವಿಜಯ ವೇದಿಕೆಯಲ್ಲಿ ಸಂಭ್ರಮಿಸಿದರು –ರಾಯಿಟರ್ಸ್ ಚಿತ್ರ
ಮಹಿಳೆಯರ ಸ್ಕೇಟ್‌ಬೋರ್ಡ್‌ನ ಪಾರ್ಕ್‌ ಸ್ಪರ್ಧೆಯಲ್ಲಿ (ಎಡದಿಂದ) ಬೆಳ್ಳಿ ಗೆದ್ದ ಕೊಕೊನಾ ಹಿರಾಕಿ, ಚಿನ್ನಕ್ಕೆ ಮುತ್ತಿಟ್ಟ ಸಕುರಾ ಯೊಸೊಜುಮಿ ಮತ್ತು ಕಂಚು ಗಳಿಸಿದ ಸ್ಕೈ ಬ್ರೌನ್‌ ವಿಜಯ ವೇದಿಕೆಯಲ್ಲಿ ಸಂಭ್ರಮಿಸಿದರು –ರಾಯಿಟರ್ಸ್ ಚಿತ್ರ   

ಟೋಕಿಯೊ: ಮಹಿಳೆಯರ ಸ್ಕೇಟ್‌ಬೋರ್ಡ್‌ನ ಪಾರ್ಕ್‌ ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ಸಕುರಾ ಯೊಸೊಜುಮಿ ಮೋಡಿ ಮಾಡಿದರು.

ಅರಿಯಾಕೆ ಅರ್ಬನ್‌ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ 19 ವರ್ಷದ ಈ ತಾರೆ 60.09 ಸ್ಕೋರ್‌ ಕಲೆಹಾಕಿ ಚಿನ್ನಕ್ಕೆ ಮುತ್ತಿಟ್ಟರು. ಆತಿಥೇಯ ದೇಶದ ಮತ್ತೋರ್ವ ಪ್ರತಿಭೆ, 12 ವರ್ಷದ ಕೊಕೊನಾ ಹಿರಾಕಿ ಬೆಳ್ಳಿಯ ಪದಕ ಪಡೆದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಜಪಾನ್‌ನ ಅತಿ ಕಿರಿಯ ಕ್ರೀಡಾಪಟು ಎಂಬ ಹಿರಿಮೆಯೂ ಅವರದ್ದಾಯಿತು. ಅವರು 59.04 ಸ್ಕೋರ್‌ ಕಲೆಹಾಕಿದರು. ಎರಡನೇ ರನ್‌ನಲ್ಲಿ ಅವರಿಂದ ಈ ಸಾಮರ್ಥ್ಯ ಮೂಡಿಬಂತು.

ಬ್ರಿಟನ್‌ನ 13 ವರ್ಷದ ಸ್ಕೈ ಬ್ರೌನ್‌ ಕಂಚು ತಮ್ಮದಾಗಿಸಿಕೊಂಡರು. ಜಪಾನ್‌ನಲ್ಲಿ ಹುಟ್ಟಿ ಬೆಳೆದ ಬ್ರೌನ್‌, ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಇಲ್ಲಿ ಅವರು ಬ್ರಿಟನ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಬ್ರೌನ್‌ ಮೊದಲ ಎರಡು ರನ್‌ಗಳಲ್ಲಿ ನಿರೀಕ್ಷಿತ ಸ್ಕೋರ್‌ ಕಲೆಹಾಕಲು ವಿಫಲರಾದರು. ಮೂರನೇ ಹಾಗೂ ಅಂತಿಮ ರನ್‌ನಲ್ಲಿ 56.47 ಸ್ಕೋರ್‌ ಗಳಿಸಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.