ADVERTISEMENT

ಅಥ್ಲೀಟ್‌ ಶಿವಪಾಲ್‌ ನಿಷೇಧ ಅವಧಿ ಕಡಿತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 2:59 IST
Last Updated 11 ಜನವರಿ 2023, 2:59 IST
   

ನವದೆಹಲಿ: ಭಾರತದ ಜಾವೆಲಿನ್ ಥ್ರೊ ಅಥ್ಲೀಟ್‌ ಶಿವಪಾಲ್ ಸಿಂಗ್ ನಿಷೇಧ ಅವಧಿಯನ್ನು ಮಂಗಳವಾರ ನಾಲ್ಕು ವರ್ಷಗಳಿಂದ ಒಂದು ವರ್ಷಕ್ಕೆ ಕಡಿತ ಮಾಡಲಾಗಿದೆ.

ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದ್ದ ಕಾರಣ ಶಿವಪಾಲ್ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನಿಷೇಧ ಹೇರಿತ್ತು. ನಿಷೇಧದ ಅವಧಿ 2025ರ ಅಕ್ಟೋಬರ್‌ವರೆಗೆ ಇತ್ತು. ಟೋಕಿಯೊ ಒಲಿಂಪಿಕ್ಸ್ ಬಳಿಕ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು.

ಶಿವಪಾಲ್ ಅವರು ಶಕ್ತಿವರ್ಧನೆಗಾಗಿ ಸೇವಿಸಿದ್ದ ವಸ್ತುವಿನಲ್ಲಿ ಉದ್ದೀಪನ ಮದ್ದು ಅಂಶ ಪತ್ತೆಯಾಗಿದ್ದು. ಆ ಶಕ್ತಿವರ್ಧಕ ನಕಲಿಯಾಗಿತ್ತು. ಆದರೆ ಇದು ಉದ್ದೇಶಪೂರ್ವಕವಾಗಿ ಸೇವಿಸಿದ್ದಲ್ಲ ಎಂಬ ಅವರ ವಾದವನ್ನು ನಾಡಾದ ಮೇಲ್ಮನವಿ ಸಮಿತಿ ಒಪ್ಪಿಕೊಂಡಿದೆ. ಹೀಗಾಗಿ ಶಿವಪಾಲ್ ಅವರ ನಿಷೇಧದ ಅವಧಿಯನ್ನು ಕಡಿಮೆ ಮಾಡಲಾಗಿದೆ.

ADVERTISEMENT

ಶಿವಪಾಲ್ ಅವರು ಈಗ ಯಾವುದೇ ಕೂಟಗಳಲ್ಲಿ ಸ್ಪರ್ಧಿಸಲು ಮುಕ್ತವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.