ADVERTISEMENT

ದಾಖಲೆಯೊಂದಿಗೆ ಚಿನ್ನ ಗೆದ್ದ ಜೆರೆಮಿ

ಪಿಟಿಐ
Published 3 ಫೆಬ್ರುವರಿ 2020, 19:41 IST
Last Updated 3 ಫೆಬ್ರುವರಿ 2020, 19:41 IST

ಕೋಲ್ಕತ್ತ: ಯೂತ್‌ ಒಲಿಂಪಿಕ್ ಚಾಂಪಿಯನ್‌ ಜೆರೆಮಿ ಲಾಲ್ರಿನುಂಗಾ ಅವರು ರಾಷ್ಟ್ರೀಯ ಸೀನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.

ಸೋಮವಾರ ನಡೆದ ಪುರುಷರ 67 ಕೆ.ಜಿ.ವಿಭಾಗದ ಸ್ಪರ್ಧೆಯಲ್ಲಿ ಜೆರೆಮಿ ಒಟ್ಟು 299 ಕೆ.ಜಿ. ಸಾಮರ್ಥ್ಯ ತೋರಿದರು. ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 167 ಕೆ.ಜಿ.ಭಾರ ಎತ್ತಿದ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT