ADVERTISEMENT

ಐಒಎಸ್‌ ಜೊತೆ ಜೆರೆಮಿ ಒಪ್ಪಂದ

ಪಿಟಿಐ
Published 3 ಜುಲೈ 2020, 16:29 IST
Last Updated 3 ಜುಲೈ 2020, 16:29 IST
ಜೆರೆಮಿ ಲಾಲ್ರಿನುಂಗಾ
ಜೆರೆಮಿ ಲಾಲ್ರಿನುಂಗಾ   

ನವದೆಹಲಿ: ಭಾರತದ ಪ್ರತಿಭಾನ್ವಿತ ವೇಟ್‌ಲಿಫ್ಟರ್‌ ಜೆರೆಮಿ ಲಾಲ್ರಿನುಂಗಾ ಅವರು ಐಒಎಸ್‌ ಸ್ಪೋರ್ಟ್ಸ್‌ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಈ ಕರಾರಿನ ಅನ್ವಯ ಇನ್ನು ಮುಂದೆ ಜೆರೆಮಿ ಅವರ ಎಲ್ಲಾ ವಾಣಿಜ್ಯ ವ್ಯವಹಾರಗಳನ್ನು ಐಒಎಸ್‌ ನೋಡಿಕೊಳ್ಳಲಿದೆ.

ಅನುಭವಿ ಬಾಕ್ಸರ್‌ಗಳಾದ ಎಂ.ಸಿ.ಮೇರಿ ಕೋಮ್‌, ವಿಜೇಂದರ್‌ ಸಿಂಗ್‌, ಸ್ಪ್ರಿಂಟರ್‌ ಹಿಮಾ ದಾಸ್‌, ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಮತ್ತು ಅನುಭವಿ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರೂ ಈ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ADVERTISEMENT

ಮಿಜೋರಾಂ ರಾಜ್ಯದ ಜೆರೆಮಿ ಅವರು ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತದ ಮೊದಲ ವೇಟ್‌ಲಿಫ್ಟರ್‌ ಎಂಬ ಹಿರಿಮೆ ಹೊಂದಿದ್ದಾರೆ. 2018ರಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ಇತ್ತೀಚೆಗೆ ನಡೆದಿದ್ದ ರಾಷ್ಟ್ರೀಯಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 67 ಕೆ.ಜಿ.ವಿಭಾಗದಲ್ಲಿ ಪಾಲ್ಗೊಂಡಿದ್ದ17 ವರ್ಷ ವಯಸ್ಸಿನ ಜೆರೆಮಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ಹೋದ ವರ್ಷ ನಡೆದಿದ್ದ ಏಷ್ಯನ್‌ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 299 ಕೆ.ಜಿ.ಭಾರ ಎತ್ತಿದ್ದ ಅವರು ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು.

‘ಐಒಎಸ್, ಭಾರತದ‌ ಅತ್ಯಂತ ಯಶಸ್ವಿ ಕಂಪನಿ. ಆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಖುಷಿಯಾಗಿದೆ’ ಎಂದು ಜೆರೆಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.