ADVERTISEMENT

ಸಂಕ್ಷಿಪ್ತ ಸುದ್ದಿಗಳು: ಜಿಯೊಸಿನಿಮಾದಲ್ಲಿ ಫಿಫಾ ವಿಶ್ವಕಪ್ ಪ್ರಸಾರ ಉಚಿತ

s

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:42 IST
Last Updated 7 ಅಕ್ಟೋಬರ್ 2022, 15:42 IST
ಗೌತಮ್ ಗಂಭೀರ್ 
ಗೌತಮ್ ಗಂಭೀರ್    

ಮುಂಬೈ: ವಯಕಾಮ್ 18 ಸ್ಪೋರ್ಟ್ಸ್‌ ನೆಟ್‌ವರ್ಕ್‌ ನ ಜಿಯೊ ಸಿನಿಮಾ ಆ್ಯಪ್‌ನಲ್ಲಿ ಮುಂಬರಲಿರುವ ಫಿಫಾ ವಿಶ್ವಕಪ್ ಟೂರ್ನಿಯ ನೇರಪ್ರಸಾರವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಕತಾರ್‌ನಲ್ಲಿ ನವೆಂಬರ್ 20ರಿಂದ ಡಿಸೆಂಬರ್ 18ರವರೆಗೆ ಫಿಫಾ ವಿಶ್ವಕಪ್ ಟೂರ್ನಿ ನಡೆಯಲಿದೆ. ಸ್ಪೋರ್ಟ್ಸ್‌ 18 ಒನ್ ಎಸ್‌ಡಿ ಹಾಗೂ ಎಚ್‌ಡಿಯಲ್ಲಿ ಟಿವಿ ಪ್ರಸಾರವೂ ಇರಲಿದೆ. ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ ಹಾಗೂ ಬಂಗಾಳಿ ಭಾಷೆಗಳಲ್ಲಿ ಲೈವ್‌ ಸ್ಟ್ರೀಮಿಂಗ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡೆಲ್ಲಿ ಹಾಫ್‌ ಮ್ಯಾರಥಾನ್; ಕಣಕ್ಕೆ ಸಬ್ಳೆ

ADVERTISEMENT

ನವದೆಹಲಿ (ಪಿಟಿಐ): ಒಲಿಂಪಿಯನ್ ಅಥ್ಲೀಟ್ ಅವಿನಾಶ್ ಸಬ್ಳೆ ಇದೇ 16ರಂದು ನಡೆಯಲಿರುವ ಡೆಲ್ಲಿ ಹಾಫ್‌ ಮ್ಯಾರಥಾನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ನ ಎಲೀಟ್ ಲೇಬಲ್ ರಸ್ತೆ ಓಟ ಇದಾಗಿದ್ದು ಜವಾಹರಲಾಲ್ ನೆಹರು ಕ್ರೀಡಾಂಗಣದಿಂದ ಆರಂಭವಾಗಲಿದೆ. ವಿಶ್ವದ ಖ್ಯಾತನಾಮ ಅಥ್ಲೀಟ್‌ಗಳು ಹಾಗೂ ಅಮೇಚೂರ್ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ.

ಗಂಭೀರ್ ಗ್ಲೋಬಲ್‌ ಮೆಂಟರ್

ನವದೆಹಲಿ (ಪಿಟಿಐ): ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಆರ್‌.ಪಿ. ಸಂಜೀವ ಗೋಯೆಂಕಾ ಸಮೂಹವು ಜಾಗತಿಕ ಮಹಾಪೋಷಕ ಸ್ಥಾನಕ್ಕೆ ನೇಮಕ ಮಾಡಿದೆ. ಐಪಿಎಲ್‌ನಲ್ಲಿ ಆಡುವ ಲಖನೌ ಸೂಪರ್ ಜೈಂಟ್ಸ್‌ ತಂಡವು ಗೊಯೆಂಕಾ ಸಮೂಹದ ಮಾಲಿಕತ್ವದ್ದಾಗಿದೆ. ಈ ತಂಡಕ್ಕೆ ಗೌತಮ್ ಮಾರ್ಗದರ್ಶಕರಾಗಿದ್ದಾರೆ.

ಇದೇ ಸಮೂಹದ ಮಾಲೀಕತ್ವದ ಡರ್ಬನ್ಸ್‌ ಸೂಪರ್ ಜೈಂಟ್ಸ್ ತಂಡವು ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್‌ನಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.