ADVERTISEMENT

ಜೊಹ್ರಿ ರಾಜೀನಾಮೆ ಅಂಗೀಕಾರಕ್ಕೆ ಚಿಂತನೆ

ಬಿಸಿಸಿಐ ಕಾರ್ಯನಿರ್ವಹಣಾಧಿಕಾರಿ

ಪಿಟಿಐ
Published 16 ಫೆಬ್ರುವರಿ 2020, 19:45 IST
Last Updated 16 ಫೆಬ್ರುವರಿ 2020, 19:45 IST
ರಾಹುಲ್ ಜೊಹ್ರಿ
ರಾಹುಲ್ ಜೊಹ್ರಿ   

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದ ರಾಹುಲ್ ಜೊಹ್ರಿ ಅವರು ಕೆಲವು ದಿನಗಳ ಹಿಂದೆ ನೀಡಿರುವ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.

‘2016ರಲ್ಲಿ ರಾಹುಲ್ ಜೊಹ್ರಿ ಅವರನ್ನು ಬಿಸಿಸಿಐಗೆ ಸಿಇಒ ಆಗಿ ನೇಮಕ ಮಾಡಿತ್ತು. ಆಗ ಶಶಾಂಕ್ ಮನೋಹರ್ ಮತ್ತು ಅನುರಾಗ್ ಠಾಕೂರ್ ಆಡಳಿತದಲ್ಲಿದ್ದರು. ನಂತರ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ)ಯೊಂದಿಗೂ ರಾಹುಲ್ ಕಾರ್ಯನಿರ್ವಹಿಸಿದ್ದರು. ಹೋದ ಅಕ್ಟೋಬರ್‌ನಲ್ಲಿ ಸೌರವ್‌ ಗಂಗೂಲಿ ಅಧ್ಯಕ್ಷತೆಯಲ್ಲಿ ಚುನಾಯಿತ ಮಂಡಳಿಯು ಅಧಿಕಾರಕ್ಕೆ ಬಂದ ಮೇಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಗಂಗೂಲಿ, ‘ರಾಜೀನಾಮೆ ಪತ್ರವು ನಮ್ಮ ಕೈಸೇರಿದ ಮೇಲೆ ಅದರ ಕುರಿತು ಮಾತನಾಡುತ್ತೇನೆ’ ಎಂದಿದ್ದಾರೆ.

ADVERTISEMENT

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಪ್ರಸಾರ ಮಾಡುವ ಸ್ಟಾರ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಿಂದ ₹ 16.348 ಕೋಟಿ ಆದಾಯವು ಬಿಸಿಸಿಐ ಬೊಕ್ಕಸ ಸೇರುವಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದರು.

ಜೊಹ್ರಿ ಡಿಸ್ಕವರಿ ನೆಟ್‌ವರ್ಕ್ಸ್‌ ಏಷ್ಯಾ ಪೆಸಿಫಿಕ್ ಸೌಥ್‌ ಏಷ್ಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ , ಪ್ರಧಾನ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.