ನವದೆಹಲಿ: ಪಂಜಾಬ್‌ನ ಜಲಂಧರ್‌ನಲ್ಲಿ ಮಂಗಳವಾರ ಆರಂಭವಾಗಲಿರುವ 15ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 30 ತಂಡಗಳು ಭಾಗವಹಿಸಲಿವೆ. ಟೂರ್ನಿಯು ಇದೇ ಮೊದಲ ಬಾರಿಗೆ ‘ಡಿವಿಷನ್ ಮಾದರಿ’ಯಲ್ಲಿ ನಡೆಯಲಿದೆ.
ಹಾಲಿ ಚಾಂಪಿಯನ್ ಪಂಜಾಬ್, ಕಳೆದ ಬಾರಿಯ ರನ್ನರ್ಸ್ ಅಪ್ ಉತ್ತರಪ್ರದೇಶ ಸೇರಿ ಅಗ್ರ 12 ತಂಡಗಳು ‘ಎ’ ಡಿವಿಷನ್‌ನಲ್ಲಿ ಆಡಲಿವೆ.
‘ಎ’ ಡಿವಿಷನ್‌ನಲ್ಲಿನ ತಂಡಗಳು ಟ್ರೋಫಿ ಗೆಲ್ಲಲು ಸೆಣಸಲಿವೆ. ‘ಬಿ’ ಡಿವಿಷನ್‌ನ ತಂಡಗಳು ಮುಂದಿನ ವರ್ಷದ ಟೂರ್ನಿಯಲ್ಲಿ ‘ಎ’ ಡಿವಿಷನ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಲು ಹಾಗೂ ‘ಸಿ’ ಡಿವಿಷನ್‌ನ ತಂಡಗಳು ‘ಬಿ’ ಡಿವಿಷನ್‌ಗೆ ಬಡ್ತಿ ಪಡೆಯಲು ಯತ್ನಿಸಲಿವೆ.
ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನ ಪಡೆಯುವ ತಂಡಗಳಿಗೆ ಹಿಂಬಡ್ತಿ ನೀಡಿ ಕೆಳಗಿನ ಡಿವಿಷನ್‌ಗೆ ಸೇರಿಲಾಗುತ್ತದೆ.
ಟೂರ್ನಿಯ ಗುಂಪು ಹಂತದ ಪಂದ್ಯಗಳು ಆಗಸ್ಟ್ 16ರಂದು ಆರಂಭವಾಗಲಿವೆ. ಆಗಸ್ಟ್ 20ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಆಗಸ್ಟ್ 23ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
‘ಬಿ’ ಮತ್ತು ‘ಸಿ’ ಡಿವಿಷನ್‌ನ ಲೀಗ್ ಪಂದ್ಯಗಳು ಆಗಸ್ಟ್ 12 ರಿಂದ 16ರ ವರೆಗೆ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.