ADVERTISEMENT

ಚಿಟಿಕೆ ಸುದ್ದಿಗಳು | ಜೂನಿಯರ್ ಹಾಕಿ: ಎ ಡಿವಿಷನ್‌ನಲ್ಲಿ ಕರ್ನಾಟಕ

ಪಿಟಿಐ
Published 31 ಜುಲೈ 2025, 14:43 IST
Last Updated 31 ಜುಲೈ 2025, 14:43 IST
ಹಾಕಿ
ಹಾಕಿ   

ಕಾಕಿನಾಡ: ಶುಕ್ರವಾರದಿಂದ ಆರಂಭವಾಗಲಿರುವ 15ನೇ ರಾಷ್ಟ್ರೀಯ ಜೂನಿಯರ್  ಮಹಿಳೆಯರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ 30 ತಂಡಗಳು ಪೈಪೋಟಿ ನಡೆಸಲಿವೆ. ಕರ್ನಾಟಕ ತಂಡವು ಎ ಗುಂಪಿನಲ್ಲಿದೆ. 

ಹೊಸದಾಗಿ ಜಾರಿಗೆ ತರಲಾಗಿರುವ ವಿಭಾಗೀಯ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಆಗಸ್ಟ್‌ 12ರಂದು ಟೂರ್ನಿ ಮುಕ್ತಾಯವಾಗಲಿದೆ.  ಎ, ಬಿ ಮತ್ತು ಸಿ ಡಿವಿಷನ್‌ಗಳಲ್ಲಿ  ತಂಡಗಳನ್ನು ವಿಂಗಡಿಸಲಾಗಿದೆ.  ಎ ಡಿವಿಷನ್‌ನಲ್ಲಿ ನಾಲ್ಕು ಗುಂಪುಗಳಿವೆ. 

ಡಿವಿಷನ್ ಎ ವಿಭಾಗದ ಪ್ರಥಮ ಗುಂಪಿನಲ್ಲಿರುವ ಕರ್ನಾಟಕ ತಂಡಕ್ಕೆ ಜಾರ್ಖಂಡ್, ಛತ್ತೀಸಗಡ ತಂಡಗಳನ್ನು ಎದುರಿಸುವುದು. 

ADVERTISEMENT

ಬಿ ಮತ್ತು ಸಿ ಡಿವಿಷನ್‌ಗಳಲ್ಲಿ ತಲಾ ಎರಡು ( ಎ ಮತ್ತು ಬಿ) ಗುಂಪುಗಳಿವೆ. 

‘ಇಂಡಿಪೆಂಡೆನ್ಸ್ ಕಪ್’ ರ‍್ಯಾಪಿಡ್ ಚೆಸ್ 

ಬೆಂಗಳೂರು: ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ಸ್‌ ಚೆಸ್ ಸಂಸ್ಥೆ (ಬಿಆರ್‌ಡಿಸಿಎ) ಆಶ್ರಯದಲ್ಲಿ  ಇದೇ 15ರಂದು ಅಖಿಲ ಭಾರತ ಫಿಡೆ ರೇಟೆಡ್  ‘ಇಂಡಿಪೆಂಡೆನ್ಸ್‌ ಕಪ್’ ರ‍್ಯಾಪಿಡ್ ಚೆಸ್ ಟೂರ್ನಿ ನಡೆಯಲಿದೆ.  

ಹೊಸಕೋಟೆಯಲ್ಲಿ ಟೂರ್ನಿ ಆಯೋಜನೆಯಾಗಿದೆ. ಒಟ್ಟು ₹2.5 ಲಕ್ಷ ಬಹುಮಾನ ಮೊತ್ತ ಇದೆ. ಹೆಸರು ನೋಂದಾಯಿಸಲು ಆಗಸ್ಟ್ 13 ಕೊನೆಯ ದಿನವಾಗಿದೆ. ವಿವರಗಳಿಗೆ ಎ. ಚಿದಾನಂದ (ಮೊ:  9663405589) ಅವರನ್ನು ಸಂಪರ್ಕಿಸಬೇಕು ಎಂದು ಮುಖ್ಯ ಆರ್ಬಿಟರ್ ಕೆ. ಮುರುಗಸುಂದರಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.