ADVERTISEMENT

ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿ | ಭಾರತಕ್ಕೆ ನಿರಾಶೆ; ಫ್ರಾನ್ಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 17:22 IST
Last Updated 24 ನವೆಂಬರ್ 2021, 17:22 IST
ಬುಧವಾರ ನಡೆದ ಕೆನಡಾ ಮತ್ತು ಪೊಲೆಂಡ್ ನಡುವಣ ಹಾಕಿ ಪಂದ್ಯ  –ಪಿಟಿಐ ಚಿತ್ರ
ಬುಧವಾರ ನಡೆದ ಕೆನಡಾ ಮತ್ತು ಪೊಲೆಂಡ್ ನಡುವಣ ಹಾಕಿ ಪಂದ್ಯ  –ಪಿಟಿಐ ಚಿತ್ರ   

ಭುವನೇಶ್ವರ್: ಆತಿಥೇಯ ಭಾರತ ತಂಡವು ಬುಧವಾರ ಇಲ್ಲಿ ಆರಂಭವಾದ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ನಿರಾಶೆ ಅನುಭವಿಸಿತು.

ಬಿ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು 4–5ರಿಂದ ಫ್ರಾನ್ಸ್ ಎದುರು ಸೋತಿತು.

ಮೊದಲ ದಿನ ನಡೆದ ಇನ್ನುಳಿದ ಪಂದ್ಯಗಳಲ್ಲಿ ಬೆಲ್ಜಿಯಂ 5–1ರಿಂದ ದಕ್ಷಿಣ ಆಫ್ರಿಕಾ ಎದುರು, ಜರ್ಮನಿ 5–2ರಿಂದ ಪಾಕಿಸ್ತಾನ ವಿರುದ್ಧ; ಪೊಲೆಂಡ್ 1–0ಯಿಂದ ಕೆನಡಾ ಎದುರು, ಮಲೇಷ್ಯಾ 2–1ರಿಂದ ಚಿಲಿ ವಿರುದ್ಧವೂ ಜಯಗಳಿಸಿದವು.

ADVERTISEMENT

ಕಳಿಂಗ ಕ್ರೀಡಾಂಗಣದಲ್ಲಿ ಟೂರ್ನಿಯನ್ನು ಉದ್ಘಾಟಿಸಲಾಯಿತು ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಎಫ್‌ಐಎಚ್ ಮುಖ್ಯಸ್ಥ ನರೀಂದರ್ ಬಾತ್ರಾ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.