ಬೆಂಗಳೂರು: ಇಲ್ಲಿಯ ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಕ್ಲಬ್ ಆಟಗಾರರು ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಕೊನೆಗೊಂಡ ರಾಷ್ಟ್ರೀಯ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಕ್ಲಬ್‌ನ ಆಟಗಾರರು 41–18ರಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿದರು. ಫೈನಲ್ ಪಂದ್ಯದಲ್ಲಿ ಚಾಮುಂಡೇಶ್ವರಿ ಕ್ಲಬ್ ರೈಡರ್‌ಗಳಾದ ಮೊಹಮ್ಮದ್ ಶೋಯಬ್, ತರುಣ್ ಎಚ್.ಕೆ, ಡಿಫೆಂಡರ್ ಶ್ರೀಕಾಂತ್ ಮತ್ತು ಆಲ್‌ರೌಂಡರ್ ಸಂಜೀವ್ ರೆಡ್ಡಿ ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.